ನ್ಯೂಸ್

VIDEO| ಮರಿ ಆನೆ ಸಫಾರಿ ವಾಹನದಲ್ಲಿರುವವರನ್ನು ಹೇಗೆ ಬೆದರಿಸುತ್ತದೆ ನೋಡಿ !

ಆನೆಗಳ ಗುಂಪಿನಲ್ಲಿ ಇದ್ದ ಮರಿ ಆನೆ ಬ್ಯಾಟರಿ ಚಾಲಿತ ವಾಹನದ ಮುಂದೆ ಬಂದು ಬೆದರಿಸಿ ನಂತರ ಓಡಿ ಗುಂಪು ಸೇರಿಕೊಳ್ಳುವ ವಿಡಿಯೋ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.

ಮರಿ ಆನೆಯ ಈ ದೃಶ್ಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಡಿಯೋ ಅಪ್​ಲೋಡ್​ ಆದ ಕೆಲವು ತಾಸುಗಳಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಆಫ್ರಿಕಾದ ಕಾಡುಗಳಲ್ಲಿ ಆನೆಗಳ ಹಿಂಡು ಸಂಚರಿಸುತ್ತಿರುತ್ತದೆ. ಸಫಾರಿ ವಾಹನ ತೆರಳುವ ದಾರಿಯಲ್ಲಿ ಆನೆಗಳು ಇರುತ್ತವೆ. ಗುಂಪಿನಲ್ಲಿ ಮರಿ ಆನೆ ಕೂಡ ಇರುತ್ತದೆ. ಇದು ಕುಣಿದು ಕುಪ್ಪಳಿಸುತ್ತಿರುತ್ತದೆ.

ನಂತರ ಮುಂದೆ ಓಡಿ ಬರುತ್ತದೆ. ಆಗ ಅಲ್ಲಿ ಬ್ಯಾಟರಿ ಚಾಲಿತ ಸಫಾರಿ ವಾಹನ ನಿಂತಿರುತ್ತದೆ. ವಾಹನವನ್ನು ನೋಡಿದ ಮರಿ ಆನೆ ಎರಡು ಕಾಲನ್ನು ಎತ್ತಿ ವಾಹನದಲ್ಲಿದ್ದವರನ್ನು ಬೆದರಿಸುತ್ತದೆ. ಕೆಲ ಕ್ಷಣಗಳ ನಂತರ ಮತ್ತೆ ಓಡಿ ಬಂದು ಆನೆಗಳ ಗುಂಪನ್ನು ಸೇರಿಕೊಳ್ಳುತ್ತದೆ.

ಈ ವಿಡಿಯೋ ನೋಡಿದರೆ ತುಂಬ ಖುಷಿ ನೀಡುತ್ತದೆ. ಹೀಗಾಗಿ ನೆಟ್ಟಿಗರು ಮರಿ ಆನೆಯ ಆಟಕ್ಕೆ ಬೋಲ್ಡ್​ ಆಗಿದ್ದಾರೆ.

ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ತುಣುಕನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ (ಐಎಫ್​ಎಸ್​) ಸುಸಂತಾ ನಂದಾ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)