ಧರಂಶಾಲಾ : ಹಿಮಾಚಲ ಪ್ರದೇಶದಲ್ಲಿ ಭಾರೀ ಜಡಿಮಳೆ ಉಂಟಾಗಿರುವ ಕಾರಣ ಧರಂಶಾಲಾ ಪಟ್ಟಣದಲ್ಲಿ ಇಂದು ಜಲಪ್ರವಾಹ ಉಂಟಾಗಿದೆ. ಈ ಫ್ಲ್ಯಾಶ್ ಫ್ಲಡ್ನಿಂದಾಗಿ ಊರಿನ ಒಳಗೆ ನೀರಿನ ಹೊಳೆಗಳು ಹರಿಯುತ್ತಿದ್ದು, ವಾಹನಗಳು ಜಲಾವೃತಗೊಂಡು ಸಿಕ್ಕಿಹಾಕಿಕೊಳ್ಳುತ್ತಿವೆ. ಜನರಿಗೆ ರಸ್ತೆಯಲ್ಲಿ ಓಡಾಡಲು ಕಷ್ಟವಾಗಿದೆ ಎನ್ನಲಾಗಿದೆ.
ಪಟ್ಟಣದ ಭಗ್ಸು ನಾಗ್ ಪ್ರದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯ ವಿಡಿಯೋ ತುಣುಕನ್ನು ಎಎನ್ಐ ಸುದ್ದಿ ಸಂಸ್ಥೆ ಶೇರ್ ಮಾಡಿದೆ.
ಈವರೆಗೆ ಯಾವುದೇ ಸಾವುನೋವಿನ ವರದಿ ಬಂದಿಲ್ಲ. ಎಲ್ಲಾ ಡಿಸಿಗಳು ಮತ್ತು ಎಸ್ಪಿಗಳಿಗೆ ಜಾಗರೂಕವಾಗಿದ್ದು, ಪ್ರವಾಸಿ ತಾಣಗಳನ್ನು ನಿಯಂತ್ರಿಸುವಂತೆ ಸೂಚಿಸಲಾಗಿದೆ ಎಂದು ರಾಜ್ಯದ ಸಿಎಂ ಜೈರಾಂ ಠಾಕೂರ್ ಹೇಳಿದ್ದಾರೆ. ಹೈರಿಸ್ಕ್ ಪ್ರದೇಶಗಳಿಗೆ ಹೋಗಬಾರದೆಂದು ಪ್ರವಾಸಿಗರಲ್ಲಿ ಮನವಿ ಮಾಡಿದ್ದಾರೆ. (ಏಜೆನ್ಸೀಸ್)