ನ್ಯೂಸ್

VIRAL VIDEO: ಕುಡಿತದ ಅಮಲಿನಲ್ಲಿ ಪಾರ್ಕ್​​​ ಬೆಂಚಿನ ಸಂಧಿಗೆ ತಲೆ ಹಾಕಿ ಪರದಾಡಿದ ಭೂಪ..! ಮುಂದೇನಾಯ್ತು ನೋಡಿ?

ಕಾನ್ಪುರ: ಕಂಟಪೂರ್ತಿ ಕುಡಿದು ಬೆಂಚ್​ ಮೇಲೆ ಮಲಗಿದ್ದ ಯುವಕನೋರ್ವ ತನ್ನ ತಲೆ ಬೆಂಚಿನ ಸಂದಿಯ ನಡುವೆ ಸಿಲುಕಿಕೊಂಡಿದ್ದ ಘಟನೆ ಕಾನ್ಪುರದ ರಾಮಲೀಲಾ ಪಾರ್ಕ್‌ನಲ್ಲಿ ನಡೆದಿದೆ.

ರಾಮ್‌ಲೀಲಾ ಪಾರ್ಕ್‌ನಲ್ಲಿ ಭಾನುವಾರ (ಏಪ್ರಿಲ್ 7) ರಂದು ರಾತ್ರಿ ಏಳು ಗಂಟೆ ಸಮಯದಲ್ಲಿ ಕುಡಿತದ ಮತ್ತಿನಲ್ಲಿ ಬೆಂಚಿನ ಅಂತರದ ನಡುವೆ ಕುಡಿದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿ ಎಚ್ಚರಗೊಳ್ಳುವ ಹೊತ್ತಿಗೆ ಬೆಂಚಿನ ನಡುವೆ ತಲೆ ಸಿಲುಕಿ ಕೊಂಡಿರುವುದು ನೆನಪಾಗಿದೆ.

ಕಾನ್ಪುರ ಪೊಲೀಸರ ಪ್ರಕಾರ, ಆ ಪಾರ್ಕ್​​ನಲ್ಲಿರುವ ಬೆಂಚಿಗೆ ತಲೆ ಸಿಕ್ಕಿಹಾಕಿಕೊಂಡಿರುವುದರಿಂದ ಕಿರುಚಾಟ ಆರಂಭಿಸಿದ್ದಾನೆ. ಮಧ್ಯರಾತ್ರಿಯಲ್ಲಿ ತನ್ನ ರಕ್ಷಣೆಗೆ ಬಂದ ಇಬ್ಬರು ಗಸ್ತು ಪೊಲೀಸರು ಬೆಂಚಿನ ನಡುವಿನ ಸಂದಿಯಲ್ಲಿ ಸಿಲುಕಿರುವುದು ತಿಳಿದುಬಂದಿದೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ.

ಸಮಯಕ್ಕೆ ಬಂದ ಪೊಲೀಸರ ನೆರವಿನಿಂದ ವ್ಯಕ್ತಿ ಗಂಭೀರ ಸಮಸ್ಯೆಯಿಂದ ಪಾರಾಗಿದ್ದಾನೆ. ಪೊಲೀಸರು ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆತನಿಗೆ ಬುದ್ಧಿವಾದ ಹೇಳಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.