

ಹೈದರಾಬಾದ್: ಅಲ್ಲು ಅರ್ಜುನ್ ಅಭಿಯನಯದ ಪುಷ್ಪ ಸಿನಿಮಾದ ಸಕ್ಸಸ್ ನಂತರ ‘ಪುಷ್ಪ 2’ ಚಿತ್ರೀಕರಣದಲ್ಲಿ ಟಾಲಿವುಡ್ ಫೇಮಸ್ ಡೈರೆಕ್ಟರ್ ಸುಕುಮಾರ್ ತುಂಬಾ ಬ್ಯುಸಿಯಾಗಿದ್ದಾರೆ. ಈಗಾಗಲೇ ಪುಷ್ಟ 2 ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಇದರ ನಡುವೆ ಸಂದರ್ಶನವೊಂದರಲ್ಲಿ ನಟಿ ಸಮಂತಾ ಬಗ್ಗೆ ಶಾಕಿಂಗ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ.
ಟಾಲಿವುಡ್‌ನ ಟಾಪ್ ನಟಿ ಸಮಂತಾ ಪ್ರತಿಭೆಯನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗಿಲ್ಲ. ಸಮಂತಾ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ ಪ್ರತಿಭಾವಂತ ಕಲಾವಿದೆ ಎಂದು ಸಾಬೀತುಪಡಿಸಿದ್ದಾರೆ.
ಹಲವು ಸಿನಿಮಾಗಳಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಸಮಂತಾ ‘ರಂಗಸ್ಥಳಂ’ ಸಿನಿಮಾದಲ್ಲೂ ಡಿಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರು. ಈ ಹಿಂದೆ ಸಮಂತಾ ಅಂತಹ ಪಾತ್ರಗಳನ್ನು ನಿರ್ವಹಿಸಿರಲಿಲ್ಲ. ಪರಿಪೂರ್ಣ ಹಳ್ಳಿ ಹುಡುಗಿಯ ಪಾತ್ರದಲ್ಲಿ ಸಮಂತಾ ಜೀವಿಸಿದ್ದಾರೆ. ಆ ಪಾತ್ರದಲ್ಲಿ ಸಮಂತಾ ಅವರನ್ನು ಬಿಟ್ಟು ಬೇರೆ ಯಾವುದೇ ನಟಿಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೊಂದೆಡೆ ಚಿತ್ರವನ್ನು ನಿರ್ದೇಶಿಸಿರುವ ಸುಕುಮಾರ್ ಸಮಂತಾ ಅವರನ್ನು ಹೊಗಳಿದ್ದಾರೆ.
ಸಮಂತಾ ನಿರ್ವಹಿಸಿದ ಲಕ್ಷ್ಮಿ ಪಾತ್ರಕ್ಕೆ ಆರಂಭದಲ್ಲಿ ಸಮಂತಾ ಅವರನ್ನು ಪರಿಗಣಿಸಿರಲಿಲ್ಲ ಎಂದು ಸುಕುಮಾರ್ ಹೇಳಿದ್ದಾರೆ. ‘ರಂಗಸ್ಥಳಂ’ ಚಿತ್ರದಲ್ಲಿ ಮಗಾ ಪವರ್ ಸ್ಟಾರ್ ಚರಣ್ ಅಭಿನಯ ಅದ್ಭುತವಾಗಿದೆ ಎಂದರು. ಚರಣ್ ಅವರನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇನೆ ಎಂದರು.
ನಾಯಕಿ ಪಾತ್ರವನ್ನು ಸಮಂತಾಗೆ ಬರೆದುಕೊಂಡಿಲ್ಲ ಎಂದಿದ್ದಾರೆ. ಹೀರೋ, ಹೀರೋಯಿನ್ ಇಬ್ಬರೂ ಸ್ಟಾರ್ ಆಗಿದ್ದರೆ ಸೆಟ್ ನಲ್ಲಿ ನಟಿಸೋಕೆ ಆಗಲ್ಲ ಅಂತ ಅಂದುಕೊಂಡಿದ್ದೆ.ಅದರಿಂದ ಹೊಸ ಹುಡುಗಿಯನ್ನೇ ನಾಯಕಿಯನ್ನಾಗಿ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.
ಆದರೆ ಚಿತ್ರದ ಕಥೆಯ ಪ್ರಕಾರ ನಮಗೆ ಒಳ್ಳೆಯ ಕಲಾವಿದೆ ಮತ್ತು ತೆಲುಗು ನಾಯಕಿ ಬೇಕು. ಸಮಂತಾ ಉತ್ತಮ ಎಂದು ನಿರ್ಧರಿಸಿ ಅವರನ್ನು ತೆಗೆದುಕೊಂಡೆವು ಎಂದರು ಸುಕುಮಾರ್. ಶೂಟಿಂಗ್ ವೇಳೆ ಸಮಂತಾ ಅಭಿನಯ ನೋಡಿ ಅಚ್ಚರಿ ಮೂಡಿಸಿದೆ ಎಂದಿದ್ದಾರೆ. ಸಮಂತಾ ಪ್ರತಿ ದೃಶ್ಯದಲ್ಲೂ ತಮ್ಮ ಅತ್ಯುತ್ತಮ ಹಾವಭಾವಗಳಿಗಾಗಿ ಪ್ರಶಂಸೆ ಪಡೆದರು. ಎಲ್ಲಿಯವರೆಗೆ ಸಿನಿಮಾ ಮಾಡುತ್ತಾರೋ ಅಲ್ಲಿಯವರೆಗೂ ಸಮಂತಾ ಜೊತೆಯಲ್ಲಿಯೇ ಸಿನಿಮಾ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
ನನ್ನ ಸಿನಿಮಾ ಕೆರಿಯರ್‌ನಲ್ಲಿ ತಾನು ನಿರ್ದೇಶನ ಮಾಡುವವರೆಗೂ ಸಮಂತಾರನ್ನು ಆಯ್ಕೆ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಸಮಂತಾಗೆ 30, 40 ಅದೆಷ್ಟೇ ವಯಸ್ಸಾದರೂ, ಅವರ ವಯಸ್ಸಿಗೆ ಸರಿ ಹೊಂದುವಂತಹ ಪಾತ್ರವನ್ನೇ ನೀಡುತ್ತೇನೆ ಎಂದಿದ್ದಾರೆ ಪುಷ್ಪ-2 ನಿರ್ದೇಶಕ ಸುಕುಮಾರ್ ಹೇಳಿದ್ದಾರೆ.