ನ್ಯೂಸ್

VIDEO | ನಡುರಸ್ತೆಯಲ್ಲಿ ಡ್ಯಾನ್ಸ್​, ಕ್ಯಾಮೆರಾಗೆ ಪೋಸ್!

ಹೈದರಾಬಾದ್​ : ವಾಹನ ಸಂಚಾರ ಹೆಚ್ಚಿರುವ ಕೇಬಲ್​​ ಬ್ರಿಡ್ಜ್​ನ ನಡುವಿನಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್ ಮಾಡುತ್ತಾ ವಿಡಿಯೋ ತೆಗೆಸಿಕೊಂಡಿರುವ ಪ್ರಸಂಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯದ ವಿಡಿಯೋ ತುಣುಕನ್ನು ಟ್ವಿಟರ್​ನಲ್ಲಿ ಶೇರ್ ಮಾಡಿರುವ ತೆಲಂಗಾಣದ ಸೈಬರಾಬಾದ್​ ಸಂಚಾರಿ ಪೊಲೀಸರು, ರಸ್ತೆಯಲ್ಲಿ ಈ ರೀತಿ ಸಾಹಸಗಳನ್ನು ಮಾಡಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದ್ದಾರೆ.

ವಿಡಿಯೋದಲ್ಲಿ - ಕಾರುಗಳು ವೇಗವಾಗಿ ಹಾದುಹೋಗುತ್ತಿರುವ ಹೈದರಾಬಾದಿನ ದುರ್ಗಮ್​ ಚೆರುವು ಕೇಬಲ್​ ಸೇತುವೆಯನ್ನು ಪುರುಷನೊಬ್ಬ ದಾಟುತ್ತಾನೆ. ನಂತರ ರಸ್ತೆ ಮಧ್ಯಕ್ಕೆ ಹೋಗಿನಿಂತು ಡ್ಯಾನ್ಸ್ ಮಾಡುತ್ತಾನೆ. ರಸ್ತೆಬದಿಯಲ್ಲಿ ನಿಂತು ವಿಡಿಯೋ ಮಾಡುತ್ತಿರುವ ತನ್ನ ಜೋಡಿದಾರನಿಗೆ ಪೋಸ್ ಕೊಡುತ್ತಾನೆ.

"ಮೋಜಿಗಾಗಿ, ರಸ್ತೆಯ ಮೇಲೆ ಸ್ಟಂಟ್​ ಮತ್ತು ಡ್ಯಾನ್ಸ್​​​ ಮಾಡಬೇಡಿ. ಇದು ಪ್ರಾಣಕ್ಕೆ ಅಪಾಯಕಾರಿ" ಎಂದು ಎಚ್ಚರಿಕೆ ನೀಡಿ ಶೇರ್ ಮಾಡಲಾಗಿದೆ. (ಏಜೆನ್ಸೀಸ್)