ತಮಿಳುನಾಡು: ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಚಿತ್ರದ ಹುಕುಂ ಹಾಡಿನ ತೆಲುಗು ಆವೃತ್ತಿಯನ್ನು ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ಇಂದು ಬಿಡುಗಡೆಗೊಳಿಸಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಜೈಲರ್' ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದ್ದು, ತಲೈವಾ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಮೊದಲ ಸಾಂಗ್ 'ಕಾವಾಲಾ' ಬಿಡುಗಡೆಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದ ಬೆನ್ನಲ್ಲೇ ತಮಿಳಿನಲ್ಲಿ ಚಿತ್ರತಂಡ ಮತ್ತೊಂದು ಹಾಡು 'ಹುಕಂ' ಅನ್ನು ರಿಲೀಸ್ ಮಾಡಿತು.
ಸದ್ಯ ಅದೇ ಹಾಡನ್ನು ಇದೀಗ ತೆಲುಗು ಭಾಷೆಯಲ್ಲಿ ವಿಕ್ಟರಿ ವೆಂಕಟೇಶ್ ಅವರು ಬಿಡುಗಡೆಗೊಳಿಸಿದ್ದು, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಆಕ್ಷನ್-ಕಾಮಿಡಿ ಜಾನರ್ನಲ್ಲಿ ಪ್ರೇಕ್ಷಕರ ಎದುರು ಹಾಜರಾಗಲಿರುವ ಈ ಚಿತ್ರವನ್ನು ಸನ್ ಪಿಕ್ಚರ್ಸ್‌ನ ಕಲಾನಿತಿ ಮಾರನ್ ನಿರ್ಮಿಸಿದ್ದಾರೆ.
ಇದನ್ನೂ ಓದಿ: 45 ದಿನಗಳಲ್ಲಿ 4 ಕೋಟಿ ರೂ. ಗಳಿಸಿದ ಟೊಮ್ಯಾಟೊ ಬೆಳೆಗಾರ!
ಜೈಲರ್ನಲ್ಲಿ ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜ್‌ಕುಮಾರ್, ಸುನೀಲ್, ರಮ್ಯಾ ಕೃಷ್ಣನ್, ವಿನಾಯಕನ್ ಮತ್ತು ಮಿರ್ನಾ ಮೆನನ್ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರವನ್ನು ಆಗಸ್ಟ್ 10 ರಂದು ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ,(ಏಜೆನ್ಸೀಸ್).