ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್(Vicky Kaushal) ಒಂದರ ಹಿಂದೊಂದು ಚಿತ್ರಗಳ ಮೂಲಕ ತನ್ನನ್ನು ತಾನು ಸಾಬೀತುಪಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ‘ಬ್ಯಾಡ್ ನ್ಯೂಸ್’ನಲ್ಲಿ ತೃಪ್ತಿ ದಿಮ್ರಿ ಮತ್ತು ಆಮಿ ವಿರ್ಕ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಸದ್ಯ ಪ್ರಸ್ತುತ ತಮ್ಮ ಮುಂದಿನ ಸಿನಿಮಾ 'ಲವ್ ಅಂಡ್ ವಾರ್' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ನಟಿಸಿದ್ದಾರೆ.
ಇದನ್ನು ಓದಿ: ಕಿರಣ್ ರಾವ್ ಜತೆಗಿನ ವಿಚ್ಛೇದನದ ಕುರಿತು ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತು; ಸಂಬಂಧದ ಅಸಲಿ ಸತ್ಯ ಬಿಚ್ಚಿಟ್ಟ Aamir Khan
ಈ ಮಧ್ಯೆ ನಿರ್ದೇಶಕ ಅಮರ್ ಕೌಶಿಕ್ ಅವರ ಮುಂಬರುವ ಪೌರಾಣಿಕ ಚಿತ್ರವಾದ ‘ಮಹಾವತಾರ್’ನಲ್ಲಿ ಶೀರ್ಷಿಕೆ ಪಾತ್ರದಲ್ಲಿ ನಟ ವಿಕ್ಕಿ ಕೌಶಲ್ ನಟಿಸಲಿದ್ದಾರೆ. ವಿಕ್ಕಿ ಹೊಸ ಚಿತ್ರಕ್ಕೆ ದಿನೇಶ್ ವಿಜನ್ ಜತೆ ಕೈಜೋಡಿಸಿದ್ದಾರೆ. ಸದ್ಯ ಚಿತ್ರತಂಡ ಬುಧವಾರ(ನವೆಂಬರ್ 13) ಸಿನಿಮಾದ ಫಸ್ಟ್ ಪೋಸ್ಟರ್ ಅನ್ನ ಹಂಚಿಕೊಂಡಿದೆ. ವಿಕ್ಕಿಯ ಲುಕ್ ಎರಡು ಫೋಟೋಗಳಲ್ಲಿ ಅನಾವರಣಗೊಂಡಿದೆ. ಫೋಟೋಗಳ ಜತೆಗೆ ಕ್ಲಿಪ್ವೊಂದನ್ನು ಶೇರ್ ಮಾಡಿದ್ದಾರೆ.
"ದಿನೇಶ್ ವಿಜನ್ ಧರ್ಮದ ಶಾಶ್ವತ ಯೋಧನ ಕಥೆಯನ್ನು ಜೀವಂತಗೊಳಿಸಿದ್ದಾರೆ! ಅಮರ್ ಕೌಶಿಕ್ ನಿರ್ದೇಶನದ #ಮಹಾವತಾರ್ ಚಿತ್ರದಲ್ಲಿ ವಿಕ್ಕಿ ಕೌಶಲ್ ಚಿರಂಜೀವಿ ಪರಶುರಾಮನಾಗಿ ನಟಿಸಿದ್ದಾರೆ. ಸಿನಿಮಾ ಚಿತ್ರಮಂದಿರಗಳಿಗೆ ಕ್ರಿಸ್ಮಸ್ 2026 ಬರಲಿದೆ ಎಂದು ಶೀರ್ಷಿಕೆಯನ್ನು ನೀಡಿ ಪೋಸ್ಟರ್ ಅನ್ನು ಹಂಚಿಕೊಳ್ಳಲಾಗಿದೆ.
ಅಸಲಿಗೆ ಪುರಾಣಗಳ ಪ್ರಕಾರ, ಪರಶುರಾಮನ ಅವತಾರವನ್ನು ವಿಷ್ಣುವಿನ ಆರನೇ ಅವತಾರ ಎಂದು ಹೇಳಲಾಗುತ್ತದೆ. ಈ ಅವತಾರದಲ್ಲಿ ಅಹಂಕಾರ ಮತ್ತು ದುರಹಂಕಾರದ ಕ್ರೂರ ಚಕ್ರವರ್ತಿ ಸಾಮ್ರಾಟ್ ಕಾರ್ತವೀರ್ಯ ಅರ್ಜುನನನ್ನು ಭೂಮಿಯಿಂದ ತೊಡದುಹಾಕಲು ವಿಷ್ಣುವು ಮಾನವ ರೂಪವನ್ನು ತೆಗೆದುಕೊಂಡನು. ಪರಶುರಾಮನ ಧ್ಯೇಯವೆಂದರೆ ಧರ್ಮವನ್ನು ಪುನಃಸ್ಥಾಪಿಸುವುದಾಗಿದೆ.
ಭಾರತೀಯ ಪುರಾಣಗಳ ಹಿನ್ನೆಲೆಯನ್ನು ಆಧರಿಸಿರುವ ಪಾತ್ರಗಳಲ್ಲಿ ನಟಿಸಲು ವಿಕ್ಕಿ ಕೌಶಲ್ ಯೋಜಿಸುತ್ತಿದ್ದ ಸಮಯದಲ್ಲಿ ದಿನೇಶ್ ವಿಜನ್ ಅವರು ಈ ಪಾತ್ರದ ಸ್ಕ್ರಿಪ್ಟ್ ಕುರಿತು ಮಾತನಾಡಿದ್ದಾರೆ. ಈ ಸಿನಿಮಾ ಮಾಡಲು ಒಂದು ನಿಮಿಷವೂ ಯೋಚಿಸದೆ ವಿಕ್ಕಿ ಕೌಶಲ್ ಒಪ್ಪಿಕೊಂಡರು ಎಂದು ಮೂಲಗಳು ತಿಳಿಸಿವೆ. ವಿಕ್ಕಿ ಕೌಶಲ್ ತಮ್ಮ ಮುಂದಿನ ಸಿನಿಮಾ ಛಾವಾದಲ್ಲಿ ಮರಾಠ ಚಕ್ರವರ್ತಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಿಸೆಂಬರ್ 6ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್)