ನ್ಯೂಸ್

ನಟಿ ಕತ್ರಿನಾ ಕೈಫ್​ಗೆ 3 ಕೋಟಿ ರೂ. ಬೆಲೆ ಬಾಳುವ ಕಾರು ಗಿಫ್ಟ್​​ ಕೊಟ್ಟ ಪತಿ!

ಮುಂಬೈ: ಕರ್ವಾ ಚೌತ್‌ ಪ್ರಯುಕ್ತ ಬಾಲಿವುಡ್​​ ನಟ ವಿಕ್ಕಿ ಕೌಶಲ್​ ಅವರು ತಮ್ಮ ಪತ್ನಿ ಕತ್ರಿನಾ ( katrina kaif ) ಅವರಿಗೆ ದುಬಾರಿ ಮೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕರ್ವಾ ಚೌತ್‌ನಲ್ಲಿ ಪತ್ನಿಗೆ ಉಡುಗೊರೆ ನೀಡುವ ಟ್ರೆಂಡ್ ಇದೆ. ಈ ಬಾರಿಯ ಕರ್ವಾ ಚೌತ್ 20 ಅಕ್ಟೋಬರ್ 2024 ರಂದು ಆಚರಿಸಲಾಗುತ್ತದೆ.

ಈ ಹಿಂದೆಯೂ ನಟಿ ಕತ್ರಿನಾ ಕೈಫ್‌ಗೆ ಅವರ ಪತಿ ವಿಕ್ಕಿ ಕೌಶಲ್ ಉಡುಗೊರೆ ನೀಡಿದ್ದರು. ಇತ್ತೀಚೆಗೆ, ವಿಕ್ಕಿ ಕತ್ರಿನಾ ಕೈಫ್‌ಗೆ ರೇಂಜ್ ರೋವರ್ 3.0 LWB ( Rover Range Rover Autobiography LWB 3.0 ) ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರಿನ ಆನ್ ರೋಡ್ ಬೆಲೆ 3.89 ಕೋಟಿ ರೂಪಾಯಿ ಎನ್ನಲಾಗಿದೆ.

ಕತ್ರಿನಾ ಕೈಫ್‌ಗೆ ಇದು ಮೊದಲ ಐಷಾರಾಮಿ ಕಾರು ಅಲ್ಲ. ನಟಿ ಬಳಿ ಮರ್ಸಿಡಿಸ್ ML 350, Audi Q7, Audi Q3 ಮತ್ತು ಇತರ ಉನ್ನತ ದರ್ಜೆಯ ವಾಹನಗಳು ಸೇರಿದಂತೆ ಐಷಾರಾಮಿ ವ್ಯಾನಿಟಿ ವ್ಯಾನ್ ಇದೆ.

ಇತ್ತೀಚೆಗೆ ಕತ್ರಿನಾ ಕೈಫ್ ತನ್ನ ಹೊಸ ರೇಂಜ್ ರೋವರ್‌ನಲ್ಲಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಕಾರಿನಲ್ಲಿ ಪ್ರಯಾಣ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸದ್ಯ ಕತ್ರಿನಾ ಕೈಫ್ ತಮ್ಮ ಹೊಸ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ರೇಂಜ್ ರೋವರ್ 3.0 LWB ಆಟೋಬಯೋಗ್ರಫಿ ಡೀಸೆಲ್ ಎಂಜಿನ್‌ನಲ್ಲಿ ಬರುತ್ತದೆ ಈ ಕಾರು 7 ಬಣ್ಣ ಆಯ್ಕೆಗಳನ್ನು ಹೊಂದಿದೆ. ಈ ಕಾರು 2997 ಸಿಸಿ ಶಕ್ತಿಶಾಲಿ ಎಂಜಿನ್ ಹೊಂದಿದೆ. ಇದು ಗಂಟೆಗೆ 234 ಕಿಮೀ ವೇಗವನ್ನು ನೀಡುತ್ತದೆ.

ರೇಂಜ್ ರೋವರ್ 3.0 ಎಲ್‌ಡಬ್ಲ್ಯೂಬಿ ಹೆಚ್ಚು ವೇಗದ ಕಾರು. ಇದು ಕೇವಲ 6.3 ಸೆಕೆಂಡ್‌ಗಳಲ್ಲಿ 0 ರಿಂದ 100 kmph ಗೆ ಸುಲಭವಾಗಿ ವೇಗವನ್ನು ಪಡೆದುಕೊಳ್ಳುತ್ತದೆ. ಫುಲ್ ಟ್ಯಾಂಕ್‌ನಲ್ಲಿ ಕಾರು ಒಟ್ಟು 1053 ಕಿ.ಮೀ ದೂರ ಓಡಬಲ್ಲದು. ಕಾರಿನ ಉದ್ದ 5252 ಮಿಮೀ. ಇದು ತುಂಬಾ ಸೊಗಸಾದ ಹೈ ಕ್ಲಾಸ್ ಲುಕ್ ನೀಡುತ್ತದೆ. ಕಾರು ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಟಿವಿ ಸ್ಕ್ರೀನ್, ಹೊಂದಾಣಿಕೆ ಸೀಟ್, ಡ್ಯುಯಲ್ ಕಲರ್ ಆಯ್ಕೆಗಳನ್ನು ಹೊಂದಿದೆ.