Rivaba Ravindrasinh Jadeja  
ನ್ಯೂಸ್

ಜ.10ರಿಂದ ಗುಜರಾತ್​​ನಲ್ಲಿ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆ - Vibrant Gujarat' Global Summit

ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಗೆ ಈಗಿಂದಲ್ಲೇ ತಯಾರಿ ನಡೆಸುತ್ತಿದ್ದೇವೆ ಎಂದು ಗುಜರಾತ್ ಸರ್ಕಾರ ಸಚಿವೆ ರಿವಾಬಾ ರವೀಂದ್ರಸಿನ್ಹ್ ಜಡೇಜಾ ಹೇಳಿದರು.

ಬೆಂಗಳೂರು: (Vibrant Gujarat' Global Summit) ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯು 2027ರ ಜ.10ರಿಂದ 12ರವರೆಗೆ ಗುಜರಾತ್​​ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಯಲಿದೆ.

ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಮತ್ತು ಈಗಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2003ರಲ್ಲಿ ಆರಂಭಿಸಿದ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯು, ಗುಜರಾತ್ ಸರ್ಕಾರ 2 ವರ್ಷಗಳಿಗೊಮ್ಮೆ ಆಯೋಜಿಸುವ ಹೂಡಿಕೆ ಶೃಂಗಸಭೆಯಾಗಿದೆ. ಇದು ಜಾಗತಿಕ, ರಾಷ್ಟ್ರೀಯ ಉದ್ಯಮ ನಾಯಕರು, ನೀತಿ ನಿರೂಪಕರು ಹಾಗೂ ಹೂಡಿಕೆದಾರರನ್ನು ಒಂದೇ ಸೂರಿನಡಿ ಒಗ್ಗೂಡಿಸುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಗೆ ಈಗಿಂದಲ್ಲೇ ತಯಾರಿ ನಡೆಸುತ್ತಿದ್ದೇವೆ ಎಂದು ಗುಜರಾತ್ ಸರ್ಕಾರ ಸಚಿವೆ ರಿವಾಬಾ ರವೀಂದ್ರಸಿನ್ಹ್ ಜಡೇಜಾ ಹೇಳಿದರು.

“ಐಟಿ, ನಾವೀನ್ಯತೆ, ಸೇವಾ ವಲಯ, ಬಾಹ್ಯಾಕಾಶ, ಎಐ, ಡೇಟಾ ಸೆಂಟರ್ ಮತ್ತು ಸೆಮಿಕಂಡಕ್ಟರ್ ಉದ್ಯಮಗಳ ಪ್ರಮುಖ ಕೇಂದ್ರವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಕೈಗಾರಿಕಾ ಮೂಲಸೌಕರ್ಯ, ಬಂದರುಗಳು, ರಾಸಾಯನಿಕಗಳು, ಪೆಟ್ರೋಕೆಮಿಕಲ್ಸ್, ರತ್ನ ಮತ್ತು ಆಭರಣ, ಡೇಟಾ ಸೆಂಟರ್, ನವೀಕರಿಸಬಹುದಾದ ಇಂಧನ ಹಾಗೂ ಜಾಗತಿಕ ಸಂಪರ್ಕದಲ್ಲಿ ಗುಜರಾತ್ ತನ್ನದೇ ಆದ ಶಕ್ತಿ ಹೊಂದಿದೆ. ನಮ್ಮ ಉದ್ಯಮಗಳು, ಉದ್ಯಮಿಗಳು ಮತ್ತು ಯುವ ಪ್ರತಿಭೆಗಳನ್ನು ಒಗ್ಗೂಡಿಸುವ ಮೂಲಕ ನಾವೀನ್ಯತೆ, ಉದ್ಯೋಗ, ಹಂಚಿಕೆಯ ಸಮೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದು ಎಂದರು.

ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ @2047’ ದೃಷ್ಟಿಕೋನದತ್ತ ಗುಜರಾತ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ನರೇಂದ್ರ ಮೋದಿಜಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ನಮ್ಮ ಸಾಮೂಹಿಕ ಪ್ರಯತ್ನಗಳು ವಿಕಸಿತ ಭಾರತ @2047ರತ್ತದ ಪಯಣವನ್ನು ಇನ್ನಷ್ಟು ಬಲಪಡಿಸಲಿವೆ” ಎಂದು ರಿವಾಬಾ ರವೀಂದ್ರಸಿನ್ಹ್ ಜಡೇಜಾ ಹೇಳಿದರು.