ಕ್ರೀಡಾಪಟುಗಳ ಗುರುತಿಸಲು ‘ವೈಬ್ ಮೂವರ್ಸ್’ ಅಭಿಯಾನ 
ನ್ಯೂಸ್

ತೆರೆಮರೆಯ ಸಾಧಕ ಕ್ರೀಡಾಪಟುಗಳ ಗುರುತಿಸಲು ‘ವೈಬ್ ಮೂವರ್ಸ್’ ಅಭಿಯಾನ- Vibe Movers’ campaign

ಕ್ರೀಡಾಪಟುಗಳ ಯಶಸ್ಸಿನ ಹಿಂದಿರುವ ಕಠಿಣ ತರಬೇತಿ, ಗಾಯದ ಸಮಸ್ಯೆಗಳು ಹಾಗೂ ಹಿನ್ನಡೆಗಳಂತಹ ನೈಜ ಹೋರಾಟದ ಕಥೆಗಳನ್ನು 'ವೈಬ್ ಮೂವರ್ಸ್' ಅನಾವರಣಗೊಳಿಸುತ್ತಿದೆ.

ಬೆಂಗಳೂರು: ತೆರೆಮರೆಯ ಸಾಧಕ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನ್ಯುಮೆರೋಸ್ ಮೋಟಾರ್ಸ್ ಸಂಸ್ಥೆಯು, ‘ವೈಬ್ ಮೂವರ್ಸ್’ ಎಂಬ ವಿನೂತನ ಅಭಿಯಾನ ಆರಂಭಿಸಿದೆ.

ಇದರ ಮೊದಲ ಭಾಗವಾಗಿ ಒಲಿಂಪಿಯನ್ ಫೆನ್ಸರ್ ಭವಾನಿ ದೇವಿ, ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್ ಯಶಸ್ವಿನಿ ಘೋರ್ಪಡೆ ಹಾಗೂ ರಾಷ್ಟ್ರೀಯ ಫುಟ್​​​​ಬಾಲ್ ಆಟಗಾರ್ತಿ ಮಿಥಿಲಾ ರಮಣಿ ಅವರ ಕ್ರೀಡಾ ಸಾಧನೆಯನ್ನು ಸಂಸ್ಥೆ ಸಂಭ್ರಮಿಸಿದೆ.

ಕ್ರೀಡಾಪಟುಗಳ ಛಲ, ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನ್ಯುಮೆರೋಸ್, ಮೂವರೂ ಸಾಧಕಿಯರಿಗೆ ವಾಹನವನ್ನು ಉಡುಗೊರೆಯಾಗಿ ನೀಡಿ ಸತ್ಕರಿಸಿದೆ. ಬರುವ ದಿನಗಳಲ್ಲಿ ಇನ್ನಷ್ಟು ಕ್ರೀಡಾಪಟುಗಳ ಯಶೋಗಾಥೆಯನ್ನು ಈ ಅಭಿಯಾನ ಒಳಗೊಳ್ಳಲಿದೆ.

ಕ್ರೀಡಾಪಟುಗಳ ಯಶಸ್ಸಿನ ಹಿಂದಿರುವ ಕಠಿಣ ತರಬೇತಿ, ಗಾಯದ ಸಮಸ್ಯೆಗಳು ಹಾಗೂ ಹಿನ್ನಡೆಗಳಂತಹ ನೈಜ ಹೋರಾಟದ ಕಥೆಗಳನ್ನು 'ವೈಬ್ ಮೂವರ್ಸ್' ಅನಾವರಣಗೊಳಿಸುತ್ತಿದೆ.

"ನಮ್ಮ ಗ್ರಾಹಕರ ದೈನಂದಿನ ಪಯಣದ ಹಲವು ಸವಾಲುಗಳನ್ನು ನಿಭಾಯಿಸಲು ಅಗತ್ಯವಿರುವ ಶಕ್ತಿ ಹಾಗೂ ದೃಢತೆಯನ್ನು ನಮ್ಮ ಸಿಯುವಿಗಳು ಹೊಂದಿವೆ. ವೈಬ್ ಮೂವರ್ಸ್‌ನಲ್ಲಿ ಕಾಣಿಸಿಕೊಂಡಿರುವ ಚಾಂಪಿಯನ್ ಕ್ರೀಡಾಪಟುಗಳು ಕೂಡ ಇದೇ ಸ್ಫೂರ್ತಿಯನ್ನು ಹೊಂದಿದ್ದಾರೆ. ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ವಿಜೇತರಾಗಿ ಹೊರಹೊಮ್ಮುವ ಅವರ ಛಲ, ಕಠಿಣ ಪರಿಶ್ರಮವೇ ನಮಗೆಲ್ಲರಿಗೂ ಪ್ರೇರಣೆ" ಎಂದು ನ್ಯುಮೆರೋಸ್ ಮೋಟಾರ್ಸ್‌ನ ಸಿಇಒ ಅರುಣ್ ಶ್ರೀವಾತ್ಸವ ಹೇಳುತ್ತಾರೆ.