ನ್ಯೂಸ್

87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಬಾಲಿವುಡ್​ ಹಿರಿಯ ನಟ ಮನೋಜ್ ಕುಮಾರ್! ಕಂಬನಿ ಮಿಡಿದ ಗಣ್ಯರು | Manoj Kumar

ನವದೆಹಲಿ: 'ಪೂರಬ್ ಔರ್ ಪಶ್ಚಿಮ್' ಮತ್ತು 'ಕ್ರಾಂತಿ'ಯಂತಹ ದೇಶಭಕ್ತಿ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾದ ಬಾಲಿವುಡ್​ ಹಿರಿಯ ನಟ ಮನೋಜ್ ಕುಮಾರ್ (Manoj Kumar), ತಮ್ಮ 87ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ತೀವ್ರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಮನೋಜ್ ಕುಮಾರ್​ರನ್ನು ಮುಂಬೈನ ಕೋಕಿಲಾಬೆನ್ ಧಿರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ, ಇಂದು (ಏ.04) ಮುಂಜಾನೆ 3:30ಕ್ಕೆ ಹೃದಯ ಸಂಬಂಧಿ ತೊಂದರೆಗಳಿಂದ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಸಂತಾಪ

ನಟನ ಸಾವಿಗೆ ಮತ್ತೊಂದು ಕಾರಣ ಡಿಕಂಪನ್ಸೇಟೆಡ್ ಲಿವರ್ ಸಿರೋಸಿಸ್ ಸಮಸ್ಯೆ ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಹೇಳಿದ್ದಾರೆ. ದಾದಾಸಾಹೇಬ್ ಫಾಲ್ಕೆ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕತ ದಿಗ್ಗಜ ನಟ ನಿಧನ ಹೊಂದಿದ ಸುದ್ದಿ ಕೇಳಿ ಬಾಲಿವುಡ್​ ಚಿತ್ರರಂಗ ಸೇರಿದಂತೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).