ನ್ಯೂಸ್

ಕಣಿವೆಗೆ ಬಿದ್ದ ವಾಹನ; ಚಾಲಕ ಸೇರಿ ಆರು ಮಂದಿ ಸಾವು

ಉತ್ತರಾಖಂಡ: ತೆಹ್ರಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಾಹನ ನಿಯಂತ್ರಣ ತಪ್ಪಿ ಕಣಿವೆಗೆ ಬಿದ್ದಿದೆ. ಈ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.

ಪ್ರಯಾಗದಿಂದ ಋಷಿಕೇಶಕ್ಕೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದ ವೇಳೆ ವಾಹನದಲ್ಲಿ 11 ಮಂದಿ ಪ್ರಯಾಣಿಕರಿದ್ದರು. ಮಾಹಿತಿ ತಿಳಿದ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಐವರನ್ನು ರಕ್ಷಿಸಿದ್ದಾರೆ.

ಉಳಿದ ಆರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಜೆ.ರವಿ ರಾವ್  ಅವರ ಪತ್ನಿ ಕಲ್ಯಾಣಿ ಅವರನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿ ಚಿಕಿತ್ಸೆಗಾಗಿ ರಿಷಿಕೇಶ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಮಳೆಯಿಂದಾಗಿ, ಪರ್ವತಗಳಿಂದ ಬಂಡೆಗಳು ಉರುಳಿದವು. ಬಂಡೆಯನ್ನು ತಪ್ಪಿಸುವ ಪ್ರಯತ್ನದಲ್ಲಿ  ವಾಹನ ನಿಯಂತ್ರಣ ತಪ್ಪಿದೆ. ರಸ್ತೆಯಿಂದ ಕಣಿವೆಯಲ್ಲಿ ಹರಿಯುವ ನದಿಗೆ ಬಿದ್ದಿದೆ. ವಾಹನ ಚಾಲಕ ಸೇರಿ ಆರು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಐವರನ್ನು ರಕ್ಷಿಸಿ ರಿಷಿಕೇಶ ಆಸ್ಪತ್ರೆಗೆ ರವಾನಿಸಿದ್ದಾರೆ.