

ಹೈದರಾಬಾದ್: ಹೆತ್ತ ತಾಯಿಯನ್ನು ಗಂಡು ಮಕ್ಕಳು ಮನೆಯಿಂದ ಹೊರ ಹಾಕಿರುವ ಘಟನೆ ವೀಣವಂಕ ಮಂಡಲದ ಹಿಮ್ಮತ್ ನಗರದಲ್ಲಿ ಶನಿವಾರ ಈ ಘಟನೆ ನಡೆದಿದೆ. ರಸ್ತೆಗೆ ಬಿದ್ದ ವೃದ್ಧೆ ನ್ಯಾಯಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ.
ಹಿಮ್ಮತ್ ನಗರದ ಸಂಗ ಮಧುರಮ್ಮ ಮತ್ತು ರಾಜಯ್ಯ ದಂಪತಿ. ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ. ರಾಜಯ್ಯ ಎಂಟು ವರ್ಷಗಳ ಹಿಂದೆ ತೀರಿಕೊಂಡಿದ್ದಾರೆ. ಮಕ್ಕಳ ಜತೆಗೆ ವಾಸವಾಗಿದ್ದ ಮಹಿಳೆ ಈಗ ಬೀದಿಗೆ ಬಿದ್ದಾರೆ. ಒಂಟಿಯಾಗಿ ಜೀವನ ನಡೆಸುವಂತೆಯಾಗಿದೆ.
ನಡೆದಿದ್ದೇನು?: ತನ್ನ ಇಬ್ಬರು ಪುತ್ರರಿಗೆ ಸ್ವಂತ ಖರ್ಚಿನಲ್ಲಿ ಮಹಾರಾಷ್ಟ್ರದಲ್ಲಿ ಉದ್ಯಮಗಳನ್ನು ಸ್ಥಾಪಿಸಿ ಹಿಮ್ಮತ್ ನಗರದಲ್ಲಿ 10 ಎಕರೆಯಲ್ಲಿ ತಲಾ 5 ಎಕರೆಯನ್ನು ಹಂಚಿದರು. ಶನಿವಾರ ಬೆಳಗ್ಗೆ ಮಧುರಮ್ಮ ಅವರ ಪುತ್ರರು ಆಕೆಯನ್ನು ಮನೆಯಿಂದ ಹೊರ ಹಾಕಿದ್ದು, ಬಾಗಿಲು ಹಾಕಿಕೊಂಡು ಹೋಗಿದ್ದಾರೆ. ಸದ್ಯ ಮಧುರಮ್ಮ ಹಿಮ್ಮತ್ ನಗರದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಖರ್ಚಿಗೆ ಹಣ ಕಳುಹಿಸುತ್ತಿಲ್ಲ. ವೃದ್ಧೆಗೆ ಜೀವನ ನಡೆಸಲು ಕಷ್ಟವಾಗುತ್ತಿತ್ತು. ಮಧುರಮ್ಮ ಮನೆ ಮನೆಗೆ ತೆರಳಿ ಊಟ, ತಿಂಡಿ ಬೇಡುತ್ತಿದ್ದಾರೆ.