ಮಾಸ್ಕೋ: ಸಂಪೂರ್ಣವಾಗಿ ವೇಗನ್ ಆಹಾರವನ್ನು ಸೇವಿಸುತ್ತಿದ್ದ ಸಾಮಾಜಿಕ ಜಾಲತಾಣದ ಇನ್ಫ್ಲುಯೆನ್ಸರ್ ಝನ್ನಾ ಸ್ಯಾಮ್ಸೊನೋವಾ ಹಸಿವಿನಿಂದ ಮೃತಪಟ್ಟಿರುವ ಘಟನೆ ರಷ್ಯಾದಲ್ಲಿ ನಡೆದಿದೆ.
ಇದನ್ನೂ ಓದಿ: ಹುಡುಗಿಯರಿಗೆ ಹಾರ್ಟ್ ಸಿಂಬಲ್ ಕಳುಹಿಸುವುದು ಅಪರಾಧ: ಈ ದೇಶ ಜಾರಿಗೆ ತಂದಿದೆ ನೂತನ ಕಾನೂನು..
ವೆಗನ್ ಎಂಬುದು ಸಂಪೂರ್ಣ ಸಸ್ಯಾಹಾರಿ ಆಹಾರಕ್ರಮವಾಗಿದ್ದು ಮಾಂಸ, ಡೈರಿ ಉತ್ಪನ್ನಗಳು, ಮೊಟ್ಟೆಗಳು, ಜೇನುತುಪ್ಪ ಅಥವಾ ಪ್ರಾಣಿಗಳಿಂದ ಪಡೆದ ಯಾವುದೇ ಉತ್ಪನ್ನವನ್ನು ಸೇವಿಸುವುದು ನಿಷಿದ್ಧವಾಗಿದೆ. ಕೇವಲ ತರಕಾರಿಗಳು, ದ್ವಿದಳ ಧಾನ್ಯಗಳು, ಬೀಜಗಳು, ಕಾಳುಗಳು, ಮತ್ತು ಹಣ್ಣುಗಳನ್ನು ಒಳಗೊಂಡಂತೆ ವಿವಿಧ ರೀತಿಯ ರುಚಿಕರವಾದ, ಪೌಷ್ಟಿಕ ಆಹಾರಗಳನ್ನು ಮಾತ್ರ ಈ ವೆಗನ್ ಡಯಟ್ ಹೊಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಝನ್ನಾ ಡಿ ಆರ್ಟ್ ಎಂಬ ಹೆಸರಿನಿಂದ ಪರಿಚಿತಳಾಗಿದ್ದ ಇನ್ಫ್ಲುಯೆನ್ಸರ್, ಮೂಲತಃ ರಷ್ಯಾದ ಪ್ರಜೆಯಾಗಿದ್ದು ಕನಿಷ್ಠ ನಾಲ್ಕು ವರ್ಷಗಳಿಂದ ಸಂಪೂರ್ಣವಾಗಿ ವೆಗನ್ ಆಹಾರ ಕ್ರಮವನ್ನು (ಡಯಟ್) ಅನುಸರಿಸಿದ ನಂತರ ಮೃತಪಟ್ಟಿದ್ದಾಳೆ. ಕೇವಲ ಹಣ್ಣುಗಳು, ಸೂರ್ಯಕಾಂತಿ ಬೀಜದ ಮೊಳಕೆ, ಹಣ್ಣಿನ ಸ್ಮೂಥಿಗಳು ಮತ್ತು ಜ್ಯೂಸ್ಗಳನ್ನು ಮಾತ್ರ ತಿನ್ನುತ್ತಿದ್ದ ಆಕೆಯು ತನ್ನ ದೇಹ ಮತ್ತು ಮನಸ್ಸು ಪ್ರತಿದಿನ ರೂಪಾಂತರಗೊಳ್ಳುವುದನ್ನು ನೋಡುತ್ತಿದ್ದೇನೆ ಎಂದು ಹೇಳಿದ್ದಳು.
ಇದನ್ನೂ ಓದಿ: ಹೆತ್ತ ಮಗನ ಪ್ರಾಣ ತೆಗೆದು ಪೊಲೀಸರಿಗೆ ಶರಣಾದ ವಯೋವೃದ್ಧ
ಆದರೆ, ಕೇವಲ ವೆಗನ್ ಸೇವಿಸುತ್ತಿದ್ದ ಕಾರಣ ದಿನೇ ದಿನೇ ಆಕೆಯ ಅನಾರೋಗ್ಯವು ಹೆಚ್ಚುತ್ತಾ ಹೋಗಿದ್ದು, ಆಕೆ ಎಲ್ಲಾ ಸಸ್ಯಾಹಾರಿ ಆಹಾರದಿಂದ ಬಳಲಿಕೆ ಮತ್ತು ಅವಳ ದೇಹದ ಮೇಲೆ ಒತ್ತಡವನ್ನು ಉಂಟುಮಾಡಿತ್ತು ಎಂದು ಹೇಳಲಾಗಿದೆ. ಅಲ್ಲದೇ, ಕೆಲವು ತಿಂಗಳ ಹಿಂದೆ ಏಷ್ಯಾದ ಪ್ರವಾಸದ ವೇಳೆ ತೀವ್ರವಾಗಿ ದಣಿದಿದ್ದು ಆಕೆಯ ಕಾಲುಗಳು ಊದಿಕೊಂಡಿದ್ದವು. ಕೂಡಲೇ ಆಕೆ ಚಿಕಿತ್ಸೆಗಾಗಿ ವಿದೇಶಕಕ್ಕೆ ಮರಳಿದ್ದಳು. ಆಗ ಇವಳನ್ನು ನೋಡಿದ ಆಕೆಯ ಸ್ನೇಹಿತರೊಬ್ಬರು ಅವಳ ನಿರ್ಜೀವ ದೇಹವನ್ನು ಕಂಡು ಭಯಪಟ್ಟಿದ್ದರು. ಆಕೆಯ ಸಾವಿನ ನಂತರ ತನ್ನ ಮಗಳ ಸಾವಿಗೆ ಕಾಲರಾ ತರಹದ ಸೋಂಕು ಕಾರಣವೆಂದು ಆಕೆಯ ತಾಯಿಯು ಹೇಳಿದ್ದು, ಆಕೆಯ ಸಾವಿಗೆ ಅಧಿಕೃತ ಕಾರಣ ಇನ್ನೂ ಪತ್ತೆಯಾಗಿಲ್ಲ.(ಏಜೆನ್ಸೀಸ್)