ರಾಮನಗರ: ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ನಲ್ಲಿ ಇರಬೇಕಾಗಿತ್ತು ಎಂದು ಅವರು ಟೀಕಿಸಿದ್ದಾರೆ.
ಸೋಮವಾರದಂದು ರಾಮನಗರದಲ್ಲಿ ಮಾತನಾಡಿದ ಅವರು, 'ರಾಜ್ಯ ಸರ್ಕಾರಕ್ಕೆ ಬುದ್ದಿ ತಲೆ ಎರಡು ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ನಲ್ಲಿ ಇರಬೇಕಾಗಿತ್ತು. ಅದರ ಬದಲು ವಿಧಾನಸೌಧದಲ್ಲಿ ಯಡಿಯೂರಪ್ಪ ಇದ್ದಾರೆ. ವಿಧಾನಸೌಧವೇ ಯಡಿಯೂರಪ್ಪ ಅವರಿಗೆ ಹುಚ್ಚಾಸ್ಪತ್ರೆ.' ಎಂದು ಹೇಳಿದ್ದಾರೆ.
ಯಡಿಯೂರಪ್ಪನ ಸರ್ಕಾರ ಅತಿ ಹೀನಾಯವಾದ ಸರ್ಕಾರ. ಆಡಳಿತ ಸಂಪೂರ್ಣವಾಗಿ ಕುಲಗೆಟ್ಟು ಹೋಗಿದೆ. ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿ ಸದಸ್ಯರನ್ನು ಪೌರಕಾರ್ಮಿಕರಿಗಿಂತ ಕೀಳಾಗಿ ನೋಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.