ತಿರುಪತಿ: ಟಾಯ್ಲೆಟ್‌ನಿಂದ ಹೊರಹೊಮ್ಮುತ್ತಿದ್ದ ಹೊಗೆಯಿಂದಾಗಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲೇ ನಿಲುಗಡೆಯಾದ ಪ್ರಸಂಗವೊಂದು ನಡೆದಿದೆ.
ತಿರುಪತಿ-ಸಿಕಂದರಾಬಾದ್ ರೈಲು ಮಾರ್ಗದಲ್ಲಿ ಇಂದು ಈ ಪ್ರಕರಣ ನಡೆದಿದೆ. ಇದರಿಂದಾಗಿ ಆಂಧ್ರಪ್ರದೇಶದ ನೆಲ್ಲೋರ್ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ನಿಲುಗಡೆ ಹೊಂದುವಂತಾಗಿತ್ತು.
ಇದನ್ನೂ ಓದಿ: ರಿಲಯನ್ಸ್ನ 1.5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಂದ ರಾಜೀನಾಮೆ!; ಕಂಪನಿಯಲ್ಲಿ ಕೆಲಸ ಬಿಡುವವರ ಪ್ರಮಾಣದಲ್ಲೂ ಹೆಚ್ಚಳ!
ಈ ರೈಲಿನ ಕೋಚ್‌ವೊಂದರ ಟಾಯ್ಲೆಟ್‌ನಿಂದ ಹೊಗೆ ಬರುತ್ತಿತ್ತು. ಇದನ್ನು ಕಂಡ ರೈಲ್ವೆ ಸಿಬ್ಬಂದಿ ಲೋಕೋಪೈಲಟ್‌ಗೆ ಮಾಹಿತಿ ನೀಡಿದ್ದು, ಮನುಬೋಲು ಎಂಬಲ್ಲಿ ರೈಲನ್ನು ನಿಲ್ಲಿಸಲಾಯಿತು.
ಬಳಿಕ ಪರಿಶೀಲನೆ ನಡೆಸಿದಾಗ ಪ್ರಯಾಣಿಕನೊಬ್ಬ ಉರಿಯುತ್ತಿದ್ದ ಸಿಗರೇಟ್ ಟಾಯ್ಲೆಟ್‌ನಲ್ಲಿ ಎಸೆದಿದ್ದು, ಅದರಿಂದ ಅಲ್ಲಿದ್ದ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡಿದ್ದೇ ಹೊಗೆ ಹೊರಹೊಮ್ಮಲು ಕಾರಣ ಎಂಬುದು ತಿಳಿದು ಬಂದಿತ್ತು.