ನ್ಯೂಸ್

ನೈನಿತಾಲ್‌ ಗಿರಿಧಾಮಕ್ಕೆ ಬೆಂಕಿ..ಹೆಲಿಕಾಪ್ಟರ್ ಮೂಲಕ ಬೆಂಕಿ ನಂದಿಸಲು ಮುಂದಾದ ಸೇನೆ!

ನೈನಿತಾಲ್​: ಉತ್ತರಾಖಂಡ್‌ನ ಜನಪ್ರಿಯ ಗಿರಿಧಾಮ, ನ್ಯಾಯಾಂಗ ರಾಜಧಾನಿ ನೈನಿತಾಲ್‌ನಲ್ಲಿ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಬೆಂಕಿ ಹಚ್ಚಿದ ಸಂಬಂಧ ಮೂವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ.

ಶುಕ್ರವಾರ ಮುಂಜಾನೆಯಿಂದ ರಾಜ್ಯಾದ್ಯಂತ 31 ಹೊಸ ಕಾಡ್ಗಿಚ್ಚಿನ ಘಟನೆಗಳು ದಾಖಲಾಗಿದ್ದು, 33.34 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ ಎಂದು ವರದಿಯಾಗಿದೆ.

ನೈನಿತಾಲ್‌ನಲ್ಲಿ ಕಾಡ್ಗಿಚ್ಚು ಉಲ್ಬಣಗೊಳ್ಳುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಬೆಂಕಿ ನೂರಾರು ಎಕರೆಗೆ ವ್ಯಾಪಿಸಿದ್ದು, ನೈನಿತಾಲ್‌ನ ಹೈಕೋರ್ಟ್ ಕಾಲೋನಿಗೂ ಆವರಿಸಿದೆ. ಇದರಿಂದಾಗಿ ನಿವಾಸಿಗಳಿಗೆ ಗಮನಾರ್ಹ ಅಪಾಯವನ್ನುಂಟು ಮಾಡಿದೆ.

ರುದ್ರಪ್ರಯಾಗದ ಅರಣ್ಯದಲ್ಲಿ ಬೆಂಕಿ ಹಚ್ಚಲು ಯತ್ನಿಸಿದ ಮೂವರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ರಾಜ್ಯಾದ್ಯಂತ ಕಾಡ್ಗಿಚ್ಚಿನ ಘಟನೆಗಳು ಹೆಚ್ಚಾಗುತ್ತಿವೆ.