ನ್ಯೂಸ್

ಉತ್ತರಕಾಂಡ ಚಿತ್ರದ ಗಬ್ರು ಸತ್ಯ ಟೀಸರ್ ವೈರಲ್ ಜತೆಗೆ ಟಗರುಪಲ್ಯ ಪ್ರಮೋಷನ್

ನಟ-ನಿರ್ಮಾಪಕ ಡಾಲಿ ಧನಂಜಯ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ "ಉತ್ತರಕಾಂಡ" ಚಿತ್ರತಂಡದವರು ಚಿತ್ರದಲ್ಲಿನ ಧನಂಜಯ್ ಅವರ ಪಾತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಇದರ ಜತೆಗೆ ನಾಗಭೂಷಣ್ ಅಭಿನಯದ ಟಗರುಪಲ್ಯ ಸಿನಿಮಾಗೆ ಪ್ರಮೋಷನ್​ ನಡೆಯುತ್ತಿದೆ.

ಹುಟ್ಟುಹಬ್ಬದ ಪೂರ್ವಭಾವಿಯಾಗಿ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದವರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡಿದ್ದರು. ಧನಂಜಯ್ ಅವರ ಪಾತ್ರವಾದ "ಗಬ್ರು ಸತ್ಯ"ನ ಪರಿಚಯಿಸುವ ಟೀಸರ್ ಬಿಡುಗಡೆ ಮಾಡಲಾಯಿತು. ಈ ಟೀಸರ್ ಈಗಾಗಲೇ ಹಿಟ್ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲವನ್ನು ಹುಟ್ಟುಹಾಕಿದೆ.ಈ ಚಿತ್ರವನ್ನು ರೋಹಿತ್ ಪದಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ಚರಣ್ ರಾಜ್ ಅವರ ಸಂಗೀತ ಈ ಚಿತ್ರಕ್ಕಿದೆ.

ಟಗರುಪಲ್ಯ ಪ್ರಮೋಷನ್:
ಟಗರುಪಲ್ಯ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಈ ಹಾಡಿಗೆ ಅಭಿಮಾನಿಗಳು ಯಾವ ರೀತಿಯಲ್ಲಾದರೂ ಸ್ಟೆಪ್ ಹಾಕಿ ವೀಡಿಯೋ ಮಾಡಲು ಚಿತ್ರತಂಡ ಹೇಳಿದೆ.