ಲಖನೌ: ಪ್ರಯಾಗ್ರಾಜ್ ಮತ್ತು ಪ್ರತಾಪಗಢ ಸೇರಿ ಉತ್ತರ ಪ್ರದೇಶದ ಐದು ಜಿಲ್ಲೆಗಳು ಕರೊನಾ ವೈರಸ್ ಮುಕ್ತ ಜಿಲ್ಲೆಗಳೆಂದು ಗುರುತಿಸಲ್ಪಟ್ಟಿವೆ.
ಪ್ರಯಾಗ್ರಾಜ್ದ ಒಂದು ಹಾಗೂ ಪ್ರತಾಪಗಢದ ಆರು ವ್ಯಕ್ತಿಗಳಿಗೆ ಶುಕ್ರವಾರ ನಡೆಸಲಾದ ಮೂರನೇ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ.
ಫಿಲಿಬಿತ್ ಮತ್ತು ಮಹಾರಾಜ್ಗಂಜ್ ನಂತರ ಹತ್ರಾಸ್, ಪ್ರಯಾಗ್ರಾಜ್ ಮತ್ತು ಪ್ರತಾಪ್ಗಢ ಜಿಲ್ಲೆಗಳನ್ನು ಕರೊನಾ ವೈರಸ್ ಮುಕ್ತ ಜಿಲ್ಲೆಗಳೆಂದು ಘೋಷಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮಿತ್ ಮೋಹನ್ ಪ್ರಸಾದ್ ಮಾತನಾಡಿ, ಹತ್ರಾಸ್ ಜಿಲ್ಲೆಯ ನಾಲ್ಕು ಪಾಸಿಟಿವ್ ರೋಗಿಗಳ ಎರಡನೇ ವರದಿ ನೆಗೆಟಿವ್ ಆಗಿದೆ ಎಂದರು. ಎಲ್ಲ ನಾಲ್ಕೂ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಪಾಸಿಟಿವ್ ಕೇಸ್ಗಳಿಲ್ಲ ಎಂದು ಹತ್ರಾಸ್ ಜಿಲ್ಲೆಯ ಮ್ಯಾಜಿಸ್ರೇಟ್ ಪ್ರವಿಣ್ ಕುಮಾರ್ ಲಕ್ಸಾರ್ ತಿಳಿಸಿದ್ದಾರೆ.
ಕೌಶಾಂಬಿಯ ಇಬ್ಬರು ರೋಗಿಗಳ ಪೈಕಿ ಒಬ್ಬ ರೋಗಿಯ ಫಲಿತಾಂಶ ಶುಕ್ರವಾರ ಮೂರನೇ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. (ಏಜೆನ್ಸೀಸ್)