ಕೌಶಾಂಬಿ: ತಂದೆಯೊಬ್ಬ ತನ್ನ 10 ವರ್ಷದ ಮಗನನ್ನು ಕಟ್ಟಿಹಾಕಿ ಥಳಿಸಿರುವ ಘಟನೆ ಉತ್ತರಪ್ರದೇಶದ ಕೌಶಾಂಬಿಯಲ್ಲಿ ನಡೆದಿದೆ.
ಇದನ್ನೂ ಓದಿ: VIDEO| ನಡುರಸ್ತೆಯಲ್ಲೇ ಡೇಂಜರಸ್ ಬೈಕ್ ಸ್ಟಂಟ್ ಮಾಡಿದ ಹುಡುಗಿ..!
ಮೈಕು ಪ್ರಜಾಪತಿ ಎಂಬಾತನೇ ಈ ಕೃತ್ಯವನ್ನು ಎಸಗಿದ್ದು, ಗುರುವಾರದಂದು ಮಗು ಶಾಲೆಗೆ ಹೋಗಲು ನಿರಾಕರಿಸಿದೆ. ಇದರಿಂದ ಕೋಪಗೊಂಡ ತಂದೆ ಮೊದಲು ಮರದ ಕೋಲಿನಿಂದ ಅದು ಮುರಿಯುವವರೆಗೂ ಥಳಿಸಿದ್ದಾನೆ. ನಂತರ, ಮಗು ಸಹಾಯಕ್ಕಾಗಿ ಕೂಗುತ್ತಿದ್ದಂತೆ ಮುರಿದ ಕೋಲಿನಿಂದಲೇ ಮತ್ತೆ ಮಗನಿಗೆ ಹೊಡೆದಿದ್ದಾನೆ.
ಈ ಭಯಾನಕ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋವನ್ನು ಗಮನಿಸಿದ ಯುಪಿ ಪೊಲೀಸರು ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಮರ್ ಬಹದ್ದೂರ್ ಈ ಕುರಿತು ಮಾತನಾಡಿದ್ದು, ತನಿಖೆ ಮುಗಿದ ನಂತರ ಪ್ರಜಾಪತಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.(ಏಜೆನ್ಸೀಸ್)