ಸಾಂದರ್ಭಿಕ ಚಿತ್ರ 
ನ್ಯೂಸ್

PUCಯಲ್ಲಿ ಕಡಿಮೆ ಮಾರ್ಕ್ಸ್ ತೆಗೆದ ವಧು; ವಿವಾಹ ಕ್ಯಾನ್ಸಲ್ ಮಾಡಿದ ವರ

ಉತ್ತರಪ್ರದೇಶ: ಇಂದು ಸಣ್ಣ ಕಾರಣಗಳಿಗೆ ಮದುವೆ ಮುರಿದುಕೊಳ್ಳುವ ಎಷ್ಟೋ ಉದಾಹರಣೆಗಳನ್ನು ನಾವು ಕೇಳಿದ್ದೇವೆ ಹಾಗೂ ಹತ್ತಿರದಿಂದ ನೋಡಿದ್ದೇವೆ.  ಪಿಯುಸಿಯಲ್ಲಿ ಕಡಿಮೆ ಅಂಕ ಬಂದ ಹುಡುಗಿಯನ್ನು ಮದುವೆಯಾಗೋದಿಲ್ಲ ಎಂದು ವರ ರಿಜೆಕ್ಟ್ ಮಾಡಿದ ಘಟನೆ ನಡೆದಿದೆ.

ಬಾಗವಾನಾ ಗ್ರಾಮದ ಸೋನು ಎಂಬಾತನಿಗೆ ಯುವತಿಯೊಬ್ಬಳ ಜತೆ ಮದುವೆ ನಿಶ್ಚಯವಾಗಿತ್ತು, ಮದುವೆ ತಯಾರಿಯಲ್ಲಿದ್ದರು. ಪಿಯುಸಿಯಲ್ಲಿ ಅಂಕ ಕಡಿಮೆ ಬಂದಿದೆ, ಈ ಹುಡುಗಿಯನ್ನು ಮದುವೆ ಆಗೋದಿಲ್ಲ ಎಂದು ಸೋನು ರಿಜೆಕ್ಟ್ ಮಾಡಿದ್ದಾನೆ. ವರದಕ್ಷಿಣೆ ನೀಡದ ಹಿನ್ನೆಲೆ ಏಕಾಏಕಿ ಮದುವೆ ರದ್ದುಮಾಡಿದ್ದು, ಕ್ಷುಲ್ಲಕ ಕಾರಣ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ವರನ ಕುಟುಂಬದ ವಿರುದ್ಧ ಎಫ್​ಐಆರ್​​ ದಾಖಲಿಸಿದ್ದಾರೆ.

ಮದುವೆಗೆಂದು ಬಂಗಾರ ನೀಡಿ, ಮದುವೆಯ ದಿನಾಂಕವನ್ನು ನಿಶ್ಚಯ ಮಾಡಲಾಗಿತ್ತು, ವರದಕ್ಷಿಣೆ ನೀಡೋದಕ್ಕೆ ವಧು ಕುಟುಂಬ ನಿರಾಕರಿಸಿದ್ದಾರೆ. ಹೀಗಾಗಿ ಇದೆ ಕಾರಣಕ್ಕೆ ಮದುವೆಯನ್ನು ನಿಲ್ಲಿಸಿದ್ದಾರೆ ಎನ್ನಲಾಗಿದೆ.