US Woman: ಅಮೆರಿಕದಲ್ಲಿ ವಾಸ್ತವ್ಯ ಹೂಡಿರುವ ಮಹಿಳೆಯೊಬ್ಬರು ತಮ್ಮ ಹಳೆಯ ಜೀವನಶೈಲಿಗೆ ವಿದಾಯ ಹೇಳಿ, ಹೊಸ ಜೀವನಕ್ಕೆ ಕಾಲಿಟ್ಟಿರುವ ಸಂಗತಿ ಹಲವರನ್ನು ಅಕ್ಷರಶಃ ಅಚ್ಚರಿಗೆ ದೂಡಿದೆ. ಈ ರೀತಿಯ ಜನರೂ ಇರ್ತಾರಾ ಎಂಬ ಪ್ರಶ್ನೆ ಬಹುತೇಕರಲ್ಲಿ ಕಾಡಿದೆ. ಅಸಲಿಗೆ ಯಾರು ಈ ಮಹಿಳೆ? ಏನಿವಳ ಕಥೆ? ತೂಕ ಇಳಿಕೆಗೆ ಪತಿಯನ್ನು ತೊರೆದಿದ್ದೇಕೆ ಎಂಬ ಪ್ರಶ್ನೆಗಳಿಗೆ ಹೀಗಿದೆ ಆಕೆಯ ಉತ್ತರ.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತಾ ಸಮೀಕ್ಷೆ; ಬಿ.ಪ್ಯಾಕ್ – ಸಿಜಿಐ ಸಹಭಾಗಿತ್ವದಲ್ಲಿ ಬಿ.ಸೇಫ್ ಸರ್ವೇ
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ತಮ್ಮ ದೇಹದ ಹೆಚ್ಚುವರಿ ತೂಕವನ್ನು ಇಳಿಸಿಕೊಳ್ಳಬೇಕು ಎಂಬ ಹಂಬಲ ಮನದೊಳಗೆ ಇರುತ್ತದೆ. ಆದರೆ, ಅದನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಅದಕ್ಕೆ ಕಾರಣ, ಇಲ್ಲದ ದೃಢವಾದ ನಿರ್ಧಾರ, ಕಾಪಾಡಿಕೊಳ್ಳದ ಬದ್ಧತೆ. ಇದ್ಯಾವುದನ್ನು ಶಿಸ್ತಿನಿಂದ ಪಾಲಿಸದೆ ಹೋದರೆ ತೂಕ ಇಳಿಸಿಕೊಳ್ಳುವುದು, ದಡೂತಿ ದೇಹವನ್ನು ಸ್ಲಿಮ್ ಆಗಿಸುತ್ತೇನೆ ಎಂಬುದು ಕೇವಲ ಮಾತಿಗಷ್ಟೇ ಸೀಮಿತವಾಗುತ್ತದೆ. ಬಹುಶಃ ಈ ಮಹಿಳೆ ಕೂಡ ಇದೇ ರೀತಿ ಯೋಚಿಸಿದ್ದು, ತನ್ನ ದಡೂತಿ ದೇಹವನ್ನು ಇಳಿಸಿಕೊಳ್ಳುವ ಉದ್ದೇಶದಿಂದ ಪತಿ ಮತ್ತು ಹೆಚ್ಚಿನ ಸಂಬಳದ ಉದ್ಯೋಗವನ್ನೇ ಬಿಟ್ಟಿದ್ದಾಳೆ.
45 ಕೆಜಿ ತೂಕ ಇಳಿಸಿಕೊಂಡ ಹಾದಿ ಕುರಿತು ಮಾತನಾಡಿರುವ ಮಹಿಳೆ ಕೋನಿ ಸ್ಟೋವರ್ಸ್, "2020. ಅದು ಕೋವಿಡ್ ಸಮಯ. ಇಡೀ ಜಗತ್ತೇ ಲಾಕ್ಡೌನ್ಗೆ ಒಳಗಾಗಿತ್ತು. ಆ ಸಮಯದಲ್ಲಿ ನಾನು ಬರೋಬ್ಬರಿ 300 ಪೌಂಡ್‌ಗಳ (136 ಕೆಜಿ) ತೂಕವಿದ್ದೆ. ದಡೂತಿ ಆಗಲು ಕಾರಣವೇ ಕೋವಿಡ್ ಸಮಯ. ಆಗ ಜಂಕ್ ಫುಡ್ ಮತ್ತು ವೈನ್ ಸೇರಿದಂತೆ ಇತರೆ ಪಾನೀಯಗಳನ್ನು ಕುಡಿಯುತ್ತಿದ್ದೆ. ಇದು ನನ್ನ ದೇಹದ ತೂಕವನ್ನು ಕ್ರಮೇಣವಾಗಿ ಏರಿಸಿತು. ಒಂದು ಸಮಯದಲ್ಲಿ ನಾನು ಓಡಾಡಲು ಕೂಡ ಕಷ್ಟಪಡುವಂತ ಪರಿಸ್ಥಿತಿ ಎದುರಾಯಿತು. ಆಗ ಮಾಡಿದ ನಿರ್ಧಾರವೇ ಇಂದು ಇಷ್ಟೊಂದು ತೂಕ ಇಳಿಕೆಗೆ ಕಾರಣ" ಎಂದು ಹೇಳಿದ್ದಾರೆ.
"ನಾಲ್ಕು ವರ್ಷಗಳ ಹಿಂದೆ, ನನ್ನ ಜೀವನ ಹೊರಗಿನಿಂದ ಚೆನ್ನಾಗಿಯೇ ಕಾಣುತ್ತಿತ್ತು. ಉತ್ತಮ ಸಂಬಳದ ಉದ್ಯೋಗ, ಮದುವೆ, ಸುಖ ಸಂಸಾರ, ಸುಂದರ ಮಗಳು, ಮನೆ ಎಲ್ಲವೂ ನಾನು ಬಯಸಿದಂತೆಯೇ ಇತ್ತು. ಆದರೆ, ಒಂದು ಸಮಯ ನನ್ನ ದೇಹವನ್ನು ನೋಡಿದಾಗ ಎಲ್ಲೋ ನಾನು ಸಿಕ್ಕಿಬಿದ್ದಂತೆ ಭಾಸವಾಯಿತು. ಶೀಘ್ರವೇ ನಾನು ಇಹಲೋಕ ತ್ಯಜಿಸುವ ಸೂಚನೆಗಳು ನನ್ನನ್ನು ಕಾಡತೊಡಗಿತು. ಇದೇ ಕಾರಣಕ್ಕೆ, ಬರುತ್ತಿದ್ದ ಉತ್ತಮ ಆದಾಯದ ಕೆಲಸಕ್ಕೆ ರಾಜೀನಾಮೆ ಕೊಟ್ಟೆ. ಪತಿಯಿಂದ ಕೆಲವು ಸಮಯ ದೂರ ಉಳಿದೆ" ಎಂದಿದ್ದಾರೆ.
"ಮೊದಲು ನಿರ್ಧರಿಸಿದ್ದೇ ನನ್ನ ಪತಿಯನ್ನು ಬಿಡಲು. ಅಷ್ಟಕ್ಕೂ ಇದು ಭಾರೀ ಕಷ್ಟಕರವಾಗಿತ್ತು. ನನ್ನನ್ನು ಪ್ರೀತಿಸುವ ಗಂಡನನ್ನು ತೊರೆಯಲು ಕಠಿಣ ಸವಾಲಾಗಿತ್ತು. ಆದರೂ ದೃಢ ಮನಸ್ಸಿನಿಂದ ಈ ನಿರ್ಧಾರ ಕೈಗೊಂಡೆ. ಹೆಚ್ಚಿನ ಸಂಬಳದ ಉದ್ಯೋಗವನ್ನು ತೊರೆದೆ. ಸ್ಕೇಟಿಂಗ್ ಮಾಡಲು ಪ್ರಾರಂಭಿಸಿದೆ. ಇದು ನನಗೆ ಹೊಸ ಜೀವನದ ಆರಂಭ ನೀಡಿತು. ಸ್ಕೇಟಿಂಗ್ ನನ್ನನ್ನು ಉಳಿಸಿತು. ದಡೂತಿ ದೇಹವನ್ನು ಇಳಿಸುವ ಕೆಲಸ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು" ಎಂದರು.
ಇದನ್ನೂ ಓದಿ: ನಾನು ಗೃಹಿಣಿ ಆಗಿರದಿದ್ದರೆ ಶ್ರಾವಣಿ ಪಾತ್ರ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ; ನಟಿ ಜೆನೆಲಿಯಾ ಡಿ’ಸೋಜಾ| Genelia D’Souza
"ನನ್ನ ತೂಕ ಹೆಚ್ಚಾದಾಗ, ನಾನು 297 ಪೌಂಡ್‌ಗಳಷ್ಟಿದ್ದೆ. ಆದರೆ, ಬೊಜ್ಜು ಕರಗಿಸಿದ ನಂತರ ಸುಮಾರು 100 ಪೌಂಡ್‌ಗಳಷ್ಟು ಕಳೆದುಕೊಂಡೆ. ಅಂದರೆ 45 ಕೆಜಿ. ಇದೆಲ್ಲದಕ್ಕಿಂತ ಹೆಚ್ಚಾಗಿ, ನನ್ನಲ್ಲಿ ಶಕ್ತಿ,ಜೀವನವೇ ಸೃಷ್ಟಿಯಾಯಿತು" ಎಂದು ಸ್ಟೋವರ್ಸ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).