ಅರಿಝೋನಾ: ಹಾವುಗಳು ಭಯಾನಕ ಸರೀಸೃಪಗಳಲ್ಲಿ ಒಂದಾಗಿದ್ದು, ಇದರ ವಿಶಿಷ್ಟ ಮತ್ತು ಅದ್ಭುತ ಸಾಮರ್ಥ್ಯಗಳು ಕೆಲವೊಂದು ಹಾವುಗಳನ್ನು ಆಕರ್ಷಕ ಜೀವಿಗಳಾಗಿ ಮಾಡಿವೆ. ಇತ್ತೀಚೆಗೆ, ಯುನೈಟೆಡ್ ಸ್ಟೇಟ್ಸ್‌ನ ಅರಿಝೋನಾದಲ್ಲಿ ಪ್ರವಾಸದಿಂದ ಬಂದ ಮಹಿಳೆ ಮನೆಯಲ್ಲಿ ಶೌಚಕ್ಕೆಂದು ಹೋಗಿದ್ದು, ಅಲ್ಲಿ ಹಾವನ್ನು ಕಂಡು ಕಂಗಾಲಾಗಿರುವ ಘಟನೆ ನಡೆದಿದೆ.
ಟಕ್ಸನ್ ನಿವಾಸಿ ಮಿಚೆಲ್ ಲೆಸ್ಪ್ರಾನ್ ಎಂಬಾಕೆಯ ಮನೆಯ ಟಾಯ್ಲೆಟ್ ಬೌಲ್‌ನಲ್ಲಿಯೇ ಹಾವು ಕಂಡು ಬಂದಿದ್ದು, ಕೂಡಲೇ ಹಾವು ಹಿಡಿಯುವ ರಾಟಲ್ಸ್ನೇಕ್ ಸೊಲ್ಯೂಷನ್ ಎಂಬ ಕಂಪನಿಯಗೆ ಕರೆ ಮಾಡಿದ್ದಾಳೆ. ಸುದ್ದಿ ತಿಳಿದ ಕಂಪನಿಯ ಸಿಬ್ಬಂದಿ, ಕೂಡಲೇ ಮಹಿಳೆ ಮನೆಗೆ ಧಾವಿಸಿದ್ದು, ಹಾವನ್ನು ಹಿಡಿಯಲು ಹರಸಾಹಸವನ್ನೇ ಪಟ್ಟಿದ್ದಾನೆ. ಕಂಪನಿಯು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಈ ಹಾವನ್ನು ಹಿಡಿಯಲು 2 ದಿನಗಳು ಬೇಕಾಯಿತು ಎಂದು ಹೇಳಿಕೊಂಡಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಮಗನ ಎರಡೂ ಕೈಗಳಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆ..!
ಹಾವನ್ನು ಕಂಡ ಕೂಡಲಳೇ ಮಹಿಳೆ ಆರಂಭದಲ್ಲಿ ಇದು ಕಾಳಿಂಗ ಸರ್ಪ ಎಂದು ಭಾವಿಸಿದ್ದರು. ಆದರೆ ಹಾವು ಹಿಡಿಯುವವನು ಆಕೆಯ ನಿವಾಸಕ್ಕೆ ತೆರಳಿ, ಅದೊಂದು ಸಂಪೂರ್ಣವಾಗಿ ವಿಭಿನ್ನ ಜಾತಿಯ ಸುಂದರವಾದ ಕಪ್ಪು ಮತ್ತು ಗುಲಾಬಿ ಬಣ್ಣದ ಕೋಚ್‌ವಿಪ್ ಹಾವು ಎಂದು ಹೇಳಿದಾಗ ಆಕೆ ನಿಟ್ಟುಸಿರು ಬಿಟ್ಟಿದ್ದಾಳೆ.
ದೃಶ್ಯವನ್ನು ನೋಡಿರುವ ನೆಟ್ಟಿಗರು ತರಹೇವಾರಿ ರೀತಿಯ ಕಾಮೆಂಟ್ಗಳನ್ನು ವ್ಯಕ್ತಪಡಿಸುತ್ತಿದ್ದು, ಘಟನೆಯ ಬಗ್ಗೆ ಅನೇಕ ಜನರು ಮೂಕವಿಸ್ಮಿತರಾಗುವುದರೊಂದಿಗೆ ಇಂದಿನ ದಿನಮಾನಗಳಲ್ಲಿ ಜಾಗೃತೆಯು ಅತ್ಯಂತ ಪ್ರಮುಖವಾದುದಾಗಿದೆ. ಏಕೆಂದರೆ ವಿಷಜಂತುಗಳು ಎಲ್ಲೆಂದರಲ್ಲಿ ಕಂಡು ಬರುತ್ತಿವೆ ಎಂದು ಹೇಳಿದ್ದರೆ, ಇನ್ನು ಕೆಲವರು ಹಾವು ಈ ರೀತಿ ಎದುರಾಗುವ ಭಯವನ್ನು ತೋರ್ಪಡಿಸಿದ್ದಾರೆ.(ಏಜೆನ್ಸೀಸ್)