JD Vance: ಜೈಪುರದ ಐಕಾನಿಕ್ ಕೋಟೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಅವರಿಗೆ ವಿಶೇಷ ಸ್ವಾಗತ ನೀಡಲಾಯಿತು.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಕೂಡ ವ್ಯಾನ್ಸ್ ಭೇಟಿಗೆ ಮುಂಚಿತವಾಗಿ ಅಂಬರ್ ಕೋಟೆಗೆ ಆಗಮಿಸಿದ್ದರು. ವ್ಯಾನ್ಸ್ ಸ್ವಾಗತಕ್ಕಾಗಿ ಅಂಬರ್ ಬಳಿಯ ಹಾಥಿ ಗಾಂವ್‌ನಲ್ಲಿ ಎರಡು ಆನೆಗಳಿಗೆ ತರಬೇತಿ ನೀಡಲಾಗಿದ್ದು, ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್ ಅವರನ್ನು ಬರಮಾಡಿಕೊಂಡರು.
ವ್ಯಾನ್ಸ್ನ ಅದ್ದೂರಿ ಸ್ವಾಗತದ ವಿಡಿಯೋ ಇಲ್ಲಿದೆ..
ಸುಂದರವಾದ ವಾಸ್ತುಶಿಲ್ಪ ಮತ್ತು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಅಂಬರ್ ಕೋಟೆ ಅರಮನೆಯನ್ನು ಸೋಮವಾರ (ಏ.22) ಮಧ್ಯಾಹ್ನ 12 ಗಂಟೆಯಿಂದ 24 ಗಂಟೆಗಳ ಕಾಲ ಪ್ರವಾಸಿಗರಿಗೆ ನಿರ್ಬಂಧಿಸಲಾಗಿತ್ತು. ಈ ಕೋಟೆಯಲ್ಲಿ ಜೆ.ಡಿ.ವ್ಯಾನ್ಸ್ ಹಾಗೂ ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಅವರ ಮುದ್ದಾದ ಮೂರು ಮಕ್ಕಳು ಎರಡು ಗಂಟೆಗಳ ಸಮಯ ಕಳೆದಿದ್ದಾರೆ.
ಪಿಂಕ್ ಸಿಟಿಯ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಅಂಬರ್ ಕೋಟೆ ಒಂದು ಸಣ್ಣ ಬೆಟ್ಟದ ಮೇಲಿದ್ದು, ಮುಖ್ಯ ನಗರದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಭವ್ಯವಾದ ಕೋಟೆಯು ಮಸುಕಾದ ಹಳದಿ ಮತ್ತು ಗುಲಾಬಿ ಮರಳುಗಲ್ಲು ಮತ್ತು ಬಿಳಿ ಅಮೃತಶಿಲೆಯಿಂದ ನಿರ್ಮಿಸಲಾಗಿದೆ.( ಏಜೆನ್ಸೀಸ್ )