US Tariff: ಅಮೆರಿಕಾದ ಹೆಚ್ಚಿನ ಸುಂಕಗಳಿಂದ ತೊಂದರೆಗೀಡಾದ ರಫ್ತುದಾರರಿಗೆ ಪರಿಹಾರವನ್ನು ನೀಡುವುದಾಗಿ ಭಾರತದ ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಗುರುವಾರ (ಸೆ18) ಭರವಸೆ ನೀಡಿದ್ದಾರೆ. ಮುಂಬರುವ ವಾರಗಳಲ್ಲಿ ಭಾರತೀಯ ಸರಕುಗಳ ಮೇಲೆ ವಿಧಿಸಲಾಗಿರುವ ಸುಂಕಗಳನ್ನು ಅಮೆರಿಕ ಶೀಘ್ರದಲ್ಲೇ ಹಿಂದಕ್ಕೆ ಪಡೆಯುವ ಅಥವಾ ಸಡಿಲಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ವಿವಾದದಲ್ಲಿ ಪಾಕಿಸ್ತಾನ ತಂಡ! ಅಂಪೈರ್ ಬೆನ್ನಿಗೆ ಬಾಲ್ ಎಸೆದ ಫೀಲ್ಡರ್, ಮುಂದೇನಾಯ್ತು? | Asia Cup 2025
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಾಗೇಶ್ವರನ್, ಆಗಸ್ಟ್‌ನಲ್ಲಿ ವಾಷಿಂಗ್ಟನ್ ವಿಧಿಸಿದ 25% ದಂಡದ ಸುಂಕವನ್ನು ನವೆಂಬರ್ ಅಂತ್ಯದ ವೇಳೆಗೆ ಹಿಂಪಡೆಯಬಹುದು ಎಂದು ಹೇಳಿದರು. ನವೆಂಬರ್ 30 ರ ನಂತರ ದಂಡದ ಸುಂಕಗಳು ಇರುವುದಿಲ್ಲ ಎಂಬ ಭರವಸೆ ಇದ್ದು, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಮುಂದಿನ ಎರಡು ತಿಂಗಳುಗಳಲ್ಲಿ ಸುಂಕದ ಬಗ್ಗೆ ಒಂದು ನಿರ್ಣಯಕ್ಕೆ ಬರಬಹುದು ಎಂದರು.
ಇದನ್ನೂ ಓದಿ:47 ಕೋಟಿ ರೂ. ವಸೂಲಿಗೆ ಎನ್ಜಿಟಿ ಹೊರಡಿಸಿದ್ದ ಆದೇಶ : ಕೇಂದ್ರ ಸರ್ಕಾರಕ್ಕೆ ನಿರ್ದೇಶನಕ್ಕೆ ಕೋರಿದ್ದ ಅರ್ಜಿ ವಜಾ
ಭಾರತದ ಮುಖ್ಯ ವ್ಯಾಪಾರ ಸಮಾಲೋಚಕ, ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ನವದೆಹಲಿಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೆರಿಕದ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ಅವರನ್ನು ಭೇಟಿಯಾದ ಕೆಲವೇ ದಿನಗಳ ನಂತರ ಈ ಹೇಳಿಕೆಗಳು ಹೊರ ಬಿದ್ದಿದ್ದು, ಕಳೆದ ತಿಂಗಳು ಟ್ರಂಪ್, ಭಾರತದ ರಫ್ತಿನ ಮೇಲೆ ಹೆಚ್ಚುವರಿ ಸುಂಕಗಳನ್ನು ಘೋಷಿಸಿದ್ದರು.
ಎರಡು ಹಂತದ ಸುಂಕ ನೀತಿಯಿಂದಾಗಿ ಕೆಲವು ಭಾರತೀಯ ಉತ್ಪನ್ನಗಳು ಶೇ 50% ರಷ್ಟು ಸುಂಕ ವಿಧಿಸಬೇಕಾಗಿದ್ದು, ಇದು ಜವಳಿ, ಎಂಜಿನಿಯರಿಂಗ್ ಸರಕುಗಳು ಮತ್ತು ಕೆಲವು ಆಹಾರ ಉತ್ಪನ್ನಗಳಂತಹ ಕಾರ್ಮಿಕ-ತೀವ್ರ ವಲಯಗಳಲ್ಲಿ ರಫ್ತುದಾರರಿಗೆ ನಷ್ಟವನ್ನುಂಟು ಮಾಡಿದೆ.
ಭಾರತ ಮಾತುಕತೆಯ ಮೂಲಕ ಪರಿಹಾರ ಹುಡುಕುತ್ತಿದ್ದರೂ, ಅಮೆರಿಕದ ರಾಜಕೀಯ ಲೆಕ್ಕಾಚಾರಗಳು ಸಹ ಫಲಿತಾಂಶವನ್ನು ರೂಪಿಸಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ. ಸರ್ಕಾರವು ಈ ವಿಷಯದಲ್ಲಿ ಆಶಾದಾಯಕವಾಗಿಯೇ ಉಳಿದಿದೆ.(ಏಜೆನ್ಸೀಸ್)