ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರು ವಿಮಾನ ಹತ್ತುವ ವೇಳೆ ಮೆಟ್ಟಿಲುಗಳಿಂದ ಮೂರು ಬಾರಿ ಜಾರಿ ಬಿದ್ದಿರುವ ಘಟನೆ ಶುಕ್ರವಾರ ಆಂಡ್ರೋ ಏರ್ಬೇಸ್ನಲ್ಲಿ ನಡೆದಿದೆ.
ಏರ್ಪೋರ್ಸ್ ಒನ್ ವಿಮಾನ ಹತ್ತುವಾಗ ಅಮೆರಿಕ ಅಧ್ಯಕ್ಷರು ಎಂದಿನಂತೆ ಸಹಜವಾಗಿ ಲವಲವಿಕೆಯಿಂದ ಹತ್ತುತ್ತಿದ್ದರು. ಈ ವೇಳೆ ಮೊದಲ ಬಾರಿಗೆ ಮೆಟ್ಟಿಲುಗಳನ್ನು ಎಡವಿದ ಅವರು ಮತ್ತದೆ ಎರಡು ಸಲ ಪುನಾರ್ವತನೆ ಮಾಡಿದರು. ಆದರೂ ಸಾವರಿಸಿಕೊಂಡು ಕ್ಯಾಬಿನ್ಗೆ ತೆರಳಿ ಏನೂ ಆಗಿಲ್ಲವಂತೆ ಕೈ ಬೀಸಿ ವಿಮಾನದೊಳಗೆ ಪ್ರವೇಶಿಸಿದರು.
78 ವರ್ಷದ ಜೋ ಬೈಡನ್ ಅವರು ಎಡವಿ ಬಿದ್ದರೂ ತಮ್ಮ ವೈದ್ಯಕೀಯ ಸಿಬ್ಬಂದಿಗೆ ಕರೆ ಮಾಡದಿರುವುದು ಅಚ್ಚರಿ ಮೂಡಿಸಿತು. ಅಲ್ಲದೇ ಅವರು ವಿರೋಧಿಗಳು ಈ ಘಟನೆಯನ್ನು ಅವರನ್ನು ಟೀಕಿಸಲು ಬಳಸಿಕೊಂಡಿದ್ದಾರೆ. ಅಧ್ಯಕ್ಷರಿಗೆ ವಯಸ್ಸಾಗಿದೆ, ನಡೆಯುವುದೂ ಕಷ್ಟ ಎಂದು ಗೇಲಿ ಮಾಡಿದ್ದಾರೆ. ವಿಡಿಯೋ ವೈರಲ್ ಆಗಿದೆ.