ನವದೆಹಲಿ: ಲೈಂಗಿಕ ಕ್ರಿಯೆ ಮೂಲಕ ಉದ್ದೇಶಪೂರ್ವಕವಾಗಿ ಏಡ್ಡ್ ರೋಗವನ್ನು ಹರಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯು ಅಮೆರಿಕದಲ್ಲಿ ನಡೆದಿದ್ದು, ಬಂಧಿತನನ್ನು ಅಲೆಕ್ಸಾಂಡರ್ ಲೂಯಿ (340 ಎಂದು ಗುರುತಿಸಲಾಗಿದೆ. ಈತನಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ಬಂಧಿತ ಆರೋಪಿಯು ಅಪ್ರಾಪ್ತರಿಮದ ಹಿಡಿದು 50 ವರ್ಷ ವಯಸ್ಸಿನ ಪುರುಷರೊಂದಿಗೆ ಲಯಂಗಿಕ ಸಂಬಂಧ ಹೊಂದಿದ್ದ ಎಂದು ತಿಳಿದು ಬಂದಿದೆ. ಈತನಿಗೆ ಕಾಯಿಲೆ ಇರುವ ವಿಚಾರ ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಕಾಯಿಲೆ ಹರಡಲು ಈ ರೀತಿ ಮಾಡಿದ್ದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಪೆನ್ ಡ್ರೈವ್ ಪ್ರಕರಣ; ಹೋರಾಟ ಮಾಡದಂತೆ ಕುಮಾರಸ್ವಾಮಿಯನ್ನು ಕಟ್ಟಿಹಾಕಿರುವವರು ಯಾರು: ಡಿಸಿಎಂ ಡಿ.ಕೆ.ಶಿವಕುಮಾರ್
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆರೋಪಿಯು ಆನ್ಲೈನ್ನಲ್ಲಿ ಅಪ್ರಾಪ್ತ ವಯಸ್ಕನೊಂದಿಗೆ ಆನ್ಲೈನ್ನಲ್ಲಿ ಲೈಂಗಿಕ ಸಂಭಾಷಣೆಯನ್ನು ಪ್ರಾರಂಭಿಸಿದ ಕಾರಣಕ್ಕಾಗಿ ಆತನ ಮೇಲೇ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆಯಲಾಗಿತ್ತು. ತನಿಖೆ ವೇಳೆ ಆತನೊಇಗೆ ಎಚ್‌ಐವಿ ಇರುವುದು ದೃಢವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆತ ಔಷಧಿಗಳನ್ನು ಸರಿಯಾಗಿ ಸೇವಿಸುತ್ತಿರಲಿಲ್ಲ.
ಎಚ್‌ಐವಿ ಹರಡಲು ಪುರುಷರು ಮತ್ತು ಹದಿಹರೆಯದ ಹುಡುಗರೊಂದಿಗೆ ಉದ್ದೇಶಪೂರ್ವಕವಾಗಿ ಲೈಂಗಿಕ ಸಂಪರ್ಕವನ್ನು ಹೊಂದಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾದ-ಪ್ರತಿವಾದ ಆಲಿಸಿದ ಬಳಿಕ ಈತನಿಗೆ 30 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.