ಕ್ಯಾಲಿಫೋರ್ನಿಯಾ: ಹನಿಮೂನ್ಗೆ ಹೋದ ವೇಳೆ ಹೆಂಡತಿಯ ಕಣ್ಮುಂದೆಯೇ ಗಂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಕ್ಯಾಲಿಫೋರ್ನಿಯಾ ನಡೆದಿದೆ.
ಸ್ಟೀಫನ್ ಫಾನ್ ಎಂಬಾತನೇ ಮೃತ ವ್ಯಕ್ತಿಯಾಗಿದ್ದು, ಈತ ಮೂರು ತಿಂಗಳ ಹಿಂದೆ ಬ್ರಿಟಾನಿ ಎಂಬುವಳ ಜತೆಗೆ ವಿವಾಹವಾಗಿದ್ದ. ಹನಿಮೂನ್ಗೆಂದು ನವವಿವಾಹಿತರು ಕ್ಯಾಲಿಫೋರ್ನಿಯಾದ ಎಲೆಕ್ಟ್ರಿಕ್ ಬೀಚ್ಗೆ ಬಂದಿದ್ದರು.
ಈ ವೇಳೆ ಸಮುದ್ರದಲ್ಲಿ ಈಜಾಡುತ್ತಿದ್ದ ಸ್ಟೀಫನ್ ಏಕಾಏಕಿ ನೀರಿನಲ್ಲಿ ಕಣ್ಮರೆಯಾಗಿದ್ದಾನೆ. ಕೂಡಲೇ ಬ್ರಿಟಾನಿ, ಗಂಡ ಸಮುದ್ರದಲ್ಲಿ ಕಾಣದಿರುವುದನ್ನು ಕಂಡು ಸಹಾಯಕ್ಕಾಗಿ ಕೂಗಿದ್ದಾಳೆ. ತಕ್ಷಣವೇ ಮೀನುಗಾರರು ಹಾಗೂ ಸ್ಥಳೀಯರು ನೀರಿಗಿಳಿದು ಆತನ ರಕ್ಷಣೆ ಮಾಡಿದ್ದಾರೆ. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಸ್ಟೀಫನ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.
ಆದರೆ, ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಆದರೆ ಇನ್ನೊಂದೆಡೆ ಕಳ್ಳರು ತಮ್ಮ ಕೈಚಳವನ್ನು ತೋರಿದ್ದು, ದಂಪತಿಯು ತಂದಿದ್ದ ಬಾಡಿಗೆ ಕಾರು, ಹಣ, ಸೆಲ್ ಫೋನ್ ಹಾಗೂ ಮತ್ತೀತರ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಈ ಘಟನೆಯಿಂದ ಎಚ್ಚೆತ್ತಿರುವ ಅಧಿಕಾರಿಗಳು ಸಾರ್ವಜನಿಕರ ರಕ್ಷಣೆಗಾಗಿ ಹಾಗೂ ಸಹಾಯಕ್ಕಾಗಿ ಬೀಚ್‌ನಲ್ಲಿ ಜೀವರಕ್ಷಕ ಸ್ಟ್ಯಾಂಡ್ನ್ನು ಸ್ಥಾಪಿಸಲು ಯೋಜಿಸಿದ್ದಾರೆ.(ಏಜೆನ್ಸೀಸ್)