ನ್ಯೂಯಾರ್ಕ್: ಆಧುನಿಕತೆಯಲ್ಲಿ ಜೀವನ ಶೈಲಿ ಬದಲಾಗುತ್ತಿದ್ದಂತೆ ಆಹಾರ ಪದ್ಧತಿಯೂ ಬದಲಾಗಿದೆ. ಪಾಶ್ಚಾತ್ಯ ಆಹಾರ ಶೈಲಿಯನ್ನು ಇಷ್ಟಪಡುವ ಸಂಖ್ಯೆ ಭಾರತದಲ್ಲೂ ಕಡಿಮೆಯೇನಿಲ್ಲ.
ಫಾಸ್ಟ್ ಫುಡ್ ಎಂಬುದು ಪಾಶ್ಚಾತ್ಯರಿಂದಲೇ ಬಂದಿದ್ದು, ಈಗ ನಮ್ಮಲ್ಲೂ ಕೂಡ ಇದಕ್ಕೆ ಸಾಕಷ್ಟು ಮಂದಿ ಅನುಸರಿಸುತ್ತಿದ್ದಾರೆ. ಆದರೆ ಆಹಾರವನ್ನೇ ಇಲ್ಲಿ ಇದನ್ನೇ ಆಹಾರವನ್ನಾಗಿ ಬಳಸುವುದಿಲ್ಲ.
ನಮ್ಮಲ್ಲಿ ಆಗೊಮ್ಮೆ ಈಗೊಮ್ಮೆ ಫಾಸ್ಟ್ಫುಡ್ ತಿನ್ನುವುದು ಸಾಮಾನ್ಯ. ಆದರೆ ಅಮೆರಿಕದಲ್ಲಿರುವ ಮನುಷ್ಯನೊಬ್ಬ ಕಳೆದ 50 ವರ್ಷಗಳಿಂದ ಮ್ಯಾಕ್ಡೊನಾಲ್ಡ್ಸ್ ಫಾಸ್ಟ್ಫುಡ್ ತಿಂದೇ ಜೀವಿಸುತ್ತಿದ್ದಾನೆ. ಹಾಗಾಗಿ 50ನೇ ವರ್ಷಕ್ಕೆ ಸಂಭ್ರಮಾಚರಣೆಯನ್ನು ಮಾಡಿಕೊಂಡಿದ್ದಾನೆ. ಈತನ ಹೆಸರು ಡಾನ್ ಗೋರ್ಸ್ಕೆ.
ಈತನಿಗೆ ಫಾಸ್ಟ್ಫುಡ್ ಎಂದರೆ ಪಂಚಪ್ರಾಣ. ಪ್ರತಿದಿನ ಈತ ಸೇವಿಸುವುದು ಇದನ್ನೆ. ಈವರೆಗೆ ಈತ 32,000 ಸಾವಿರ ಬರ್ಗರ್ಗಳನ್ನು ಸೇವಿಸಿದ್ದಾನಂತೆ. 1972ರಲ್ಲಿ ಈತ ಬರ್ಗರ್ ತಿನ್ನಲು ಆರಂಭಿಸಿದ್ದನಂತೆ ಈಗ 50 ವರ್ಷದ ತುಂಬಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ನಾನು ಫಾಸ್ಟ್ಫುಡ್ನ್ನು ತುಂಬಾ ಪ್ರೀತಿಸುತ್ತೇನೆ. 50 ವರ್ಷ ಪೂರೈಸಿದ್ದು, ತುಂಬಾ ಖುಷಿಯಾಗುತ್ತಿದ್ದೇನೆ. ನಾನು ಬದುಕಿರುವವರೆಗೂ ಇದನ್ನೇ ತಿನ್ನುತ್ತೇನೆ ಎಂದು ಹೇಳಿಕೊಂಡಿದ್ದಾನೆ.
ಸತತ ಐದು ದಶಕಗಳ ಕಾಲ ಬರ್ಗರನ್ನೇ ತಿಂದು ಬದುಕುತ್ತಿರುವ ಈತನ ಹೆಸರು ಗಿನ್ನಿಸ್ ದಾಖಲೆಯಲ್ಲೂ ಸೇರಿದೆ. ಬಹುಶಃ ಈ ದಾಖಲೆಯನ್ನು ಬೇರೆಯವರು ಮುರಿಯಲು ಸಾಧ್ಯವಿಲ್ಲವೇನೋ. (ಏಜೆನ್ಸೀಸ್)