ನ್ಯೂಸ್

ಚೀನೀ ಸರ್ಕಾರದ ವಿರುದ್ಧ 20 ಲಕ್ಷ ಕೋಟಿ ಡಾಲರ್ ಮೌಲ್ಯದ ದಾವೆ ಹೂಡಿದ್ದೇಕೆ ಅಮೆರಿಕದ ಅಡ್ವೊಕಸಿ ಗ್ರೂಪ್ ?

ವಾಷಿಂಗ್ಟನ್‍: ಚೀನಾ ಸರ್ಕಾರ  ಕರೊನಾ ವೈರಸ್‍ ಅನ್ನು ಅಕ್ರಮ ಬಯಾಲಾಜಿಕಲ್ ವೆಪನ್‍ ಆಗಿ ಅಭಿವೃದ್ಧಿ ಪಡಿಸುತ್ತಿದೆ ಎಂದು ವಾಷಿಂಗ್ಟನ್ ಮೂಲದ ಫ್ರೀಡಂ ವಾಚ್‍ ಎಂಬ ಅಡ್ವೊಕಸಿ ಗ್ರೂಪ್‍  ಮತ್ತು ಟೆಕ್ಸಾಸ್‍ನ ಬಝ್ ಫೊಟೋಸ್‍ ಎಂಬ ಕಂಪನಿಗಳು ಆರೋಪಿಸಿವೆ. ಅಷ್ಟೇ ಅಲ್ಲ, ಚೀನಾ ಸರ್ಕಾರದ ವಿರುದ್ಧ 20 ಲಕ್ಷ ಕೋಟಿ ಡಾಲರ್ ಮೌಲ್ಯದ  ಪರಿಹಾರ ಕೋರಿ ದಾವೆಯನ್ನೂ ಹೂಡಿವೆ.

ಈ ದಾವೆಯ ದೂರುದಾರರ ಆರೋಪ ಪ್ರಕಾರ, ಚೀನೀ ಸರ್ಕಾರ ಕರೊನಾ ವೈರಸ್‍ ಅನ್ನು ಅಕ್ರಮ ಬಯಾಲಾಜಿಕಲ್ ವೆಪನ್ ಆಗಿ ಅಭಿವೃದ್ಧಿಪಡಿಸುತ್ತಿದೆ. ಮತ್ತು ಅದನ್ನು ವುಹಾನ್ ಪ್ರಾಂತ್ಯದ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಮೂಲಕ ಬಿಡುಗಡೆ ಮಾಡಿಸಿದೆ. ಕರೊನಾ ವೈರಸ್‍ ಸೋಂಕು ಮೊದಲು ಕಂಡುಬಂದಿದ್ದೇ ಇದೇ ಸ್ಥಳದಲ್ಲಿ.  ವಾಸ್ತವದಲ್ಲಿ COVID19 ಅಥವಾ ನೋವೆಲ್ ಕರೊನಾ ವೈರಸ್‍ ಅನಿರೀಕ್ಷಿತವಾಗಿ ಯಾವುದೇ ಯೋಜನೆ ಇಲ್ಲದೇ ಬಿಡುಗಡೆಗೊಂಡಿದೆ. ಅಮೆರಿಕದ ಜನರ ವಿರುದ್ಧ ಮಾತ್ರವಲ್ಲ ಚೀನಾ ದೇಶ ತನ್ನ ಯಾವುದೇ ಶತ್ರು ರಾಷ್ಟ್ರದ  ಮೇಲೆ ಬಳಸುವುದಕ್ಕಾಗಿ ಈ ವೈರಸ್ ಅನ್ನು ಒಂದು ಬಯಾಲಾಜಿಕಲ್ ವೆಪನ್ ಆಗಿ ಸಂಗ್ರಹಿಸಿ ಇರಿಸಲಾಗುತ್ತಿತ್ತು.

ಈ ಬೆಳವಣಿಗೆಗೆ ಪೂರಕವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಸ್ವಲ್ಪ ಮಟ್ಟಿಗೆ ಅಪ್‍ಸೆಟ್ ಆಗಿರುವ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಮಾರಕ ಸೋಂಕಿನ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವಲ್ಲಿ ವಿಳಂಬ ಮಾಡಿದ್ದು ಮತ್ತು ಅಮೆರಿಕದ ಮೆಡಿಕಲ್ ಪರಿಣತರ ತಂಡವನ್ನು ಅಲ್ಲಿಗೆ ಕಳುಹಿಸುವ ಪ್ರಸ್ತಾವನೆಯನ್ನು ಚೀನಾ ತಳ್ಳಿ ಹಾಕಿತ್ತು. ಇದು ಅಮೆರಿಕದ ಘನತೆಗೆ ಧಕ್ಕೆ ಎಂದೇ ಭಾವಿಸಿದ್ದಾರೆ.

ಅಮೆರಿಕದಲ್ಲಿ ಇದುವರೆಗೆ ಸೋಂಕುಪೀಡಿತರ ಸಂಖ್ಯೆ 30,000ದ ಗಡಿ ದಾಟಿದೆ. ಇದೇ ವೇಳೆ ಅಲ್ಲಿ ಮರಣ ಪ್ರಮಾಣ 400ರ ಗಡಿದಾಟಿದೆ. ನ್ಯೂಯಾರ್ಕ್‍ ರಾಜ್ಯ ಅದರಲ್ಲೂ ನ್ಯೂಯಾರ್ಕ್ ಪಟ್ಟಣ ಈ ಸೋಂಕಿನ ಹಾಟ್‍ಸ್ಪಾಟ್ ಆಗಿ ಪರಿವರ್ತನೆಗೊಂಡಿದೆ. ಅಮೆರಿಕದ ಇತ್ತೀಚಿನ ಇತಿಹಾಸದ ಪ್ರಕಾರ ಇಂಥ ಭೀಕರ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಉಂಟಾಗಿರಲಿಲ್ಲ. ಪ್ರತಿ ಇಬ್ಬರು ಅಮೆರಿಕನ್ನರ ಪೈಕಿ ಒಬ್ಬನಿಗೆ ಈ ಸೋಂಕು ತಗುಲಿದೆ.

ಕನ್ಸರ್‍ವೇಟಿವ್ ಲಾಯರ್ ಲ್ಯಾರಿ ಕ್ಲೇಮನ್‍ ಪರವಾಗಿ ದಾವೆ ಹೂಡಲ್ಪಟ್ಟಿದ್ದು, ಚೀನೀ ಸರ್ಕಾರದಿಂದ ಪರಿಹಾರಕ್ಕೆ ಆಗ್ರಹಿಸಲಾಗಿದೆ. ಚೀನೀ ಸರ್ಕಾರದ ಅಜಾಗರೂಕತೆ ಮತ್ತು ಉದಾಸೀನತೆ ಪರಿಣಾಮ ಇಂಥ ಬೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಚೀನೀ ಜನರು ಉತ್ತಮರಾಗಿದ್ದರೂ ಅವರ ಸರ್ಕಾರ ಉತ್ತಮವಾದುದಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಬಝ್ ಫೋಟೋ ಕಂಪನಿ ತನ್ನ ವ್ಯವಹಾರ ನಷ್ಟ ಭರ್ತಿಗಾಗಿ 50,000 ಡಾಲರ್‍ ಪರಿಹಾರವನ್ನು ನೀಡುವಂತೆ ಆಗ್ರಹಿಸಿ ದಾವೆ ಹೂಡಿದೆ. ಶಾಲೆಗಳು ಮುಚ್ಚಿದ್ದರಿಂದ ಮತ್ತು ಕ್ರೀಡಾ ಕೂಟಗಳು ರದ್ದಾದ ಪರಿಣಾಮ ಆದ ನಷ್ಟದಿಂದಾಗಿ ಅನೇಕ ಕೆಲಸದವರನ್ನು ಅನಿವಾರ್ಯವಾಗಿ ಕೆಲಸದಿಂದಲೇ ಬಿಡಿಸಬೇಕಾಗಿ ಬಂತು ಎಂಬ ಸಮರ್ಥನೆಯನ್ನೂ ಕಂಪನಿ ನೀಡಿದೆ. (ಏಜೆನ್ಸೀಸ್)