ನ್ಯೂಸ್

ರಷ್ಯಾದ ತೈಲ ಖರೀದಿಯ ಬಗ್ಗೆ ಅಮೆರಿಕ, ಭಾರತದೊಂದಿಗೆ ಎಂದು ಚರ್ಚಿಸಿಲ್ಲ: ಜೈಶಂಕರ್​| Jaishankar

Jaishankar: ಅಮೆರಿಕವು ಭಾರತದೊಂದಿಗೆ ರಷ್ಯಾ ತೈಲ ಖರೀದಿಯ ವಿಷಯವಾಗಿ ಎಂದಿಗೂ ಚರ್ಚಿಸಿಲ್ಲ ಎಂದು ವಿದೇಶಾಂಗ ಸಚಿವ ಜೈಶಂಕರ್​ ಶನಿವಾರ (ಆಗಸ್ಟ್​,23) ತಿಳಿಸಿದ್ದಾರೆ.

ಈ ಬಗ್ಗೆ ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್ 2025 ರಲ್ಲಿ ಮಾತನಾಡಿದ ಜೈಶಂಕರ್, ಪ್ರಸ್ತುತ ಟ್ರಂಪ್​​ರಂತೆ ವಿದೇಶಾಂಗ ನೀತಿಯನ್ನು ಬಹಿರಂಗವಾಗಿ ನಿರ್ವಹಿಸಿದ ಅಮೆರಿಕದ ಅಧ್ಯಕ್ಷರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಟ್ರಂಪ್ ಮಾಡುವಂತೆ ತಮ್ಮ ದೇಶೀಯ ವಿಷಯಗಳನ್ನು ಸಾರ್ವಜನಿಕವಾಗಿ ನಿರ್ವಹಿಸಿದ ಯಾವುದೇ ಅಮೆರಿಕ ಅಧ್ಯಕ್ಷರು ಇರಲಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಜೈಶಂಕರ್, ಅಮೆರಿಕ ಅಧ್ಯಕ್ಷ ಟ್ರಂಪ್ ಜಗತ್ತಿನೊಂದಿಗೆ ವ್ಯವಹರಿಸುವ ರೀತಿ, ತಮ್ಮದೇ ದೇಶದೊಂದಿಗೆ ವ್ಯವಹರಿಸುವ ರೀತಿಯಲ್ಲಿ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಸಿದರು.

ಟ್ರಂಪ್ ಹೇರುವ ಸುಂಕದ ಕುರಿತು ಮಾತನಾಡಿದ ಸಚಿವರು, ವ್ಯಾಪಾರ ಮತ್ತು ವ್ಯಾಪಾರೇತರ ವಿಷಯಗಳಿಗೆ ಟ್ರಂಪ್ ಸುಂಕದ ಬಳಕೆ ಹೊಸತನದ್ದಾಗಿದೆ. ಟ್ರಂಪ್ ಸುಂಕದ ಘೋಷಣೆಯನ್ನು ಹೆಚ್ಚಾಗಿ ಸಾರ್ವಜನಿಕವಾಗಿ ಮಾಡಲಾಗುತ್ತದೆ. ನಂತರ ಸಂಬಂಧಪಟ್ಟ ದೇಶಕ್ಕೆ ಆದನ್ನು ವಿಧಿಸಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅಮೆರಿಕ ಜತೆಗಿನ ವ್ಯಾಪಾರದ ಬಗ್ಗೆ ಜೈಶಂಕರ್ ಮಾತು

ಭಾರತ-ಯುಎಸ್ ವ್ಯಾಪಾರ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಆದರೆ, ಯಾರೂ ಅಮೆರಿಕದೊಂದಿಗಿನ ಮಾತುಕತೆಗಳು ಮುಗಿದಿವೆ ಎಂದು ಹೇಳಲಿಲ್ಲ. ಜನರು ಪರಸ್ಪರ ಮಾತನಾಡುತ್ತಾರೆ. ನಮಗೆ ನಮ್ಮ ರೈತರ ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿಗಳಾಲಿವೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ರಷ್ಯಾದೊಂದಿಗಿನ ತೈಲ ಖರೀದಿಯ ಸಮಸ್ಯೆ

ರಷ್ಯಾದಿಂದ ಅತಿದೊಡ್ಡ ತೈಲ ಆಮದುದಾರ ಚೀನಾ ಮತ್ತು ಅತಿದೊಡ್ಡ ಇಂಧನ ಆಮದುದಾರ ಯುರೋಪಿಯನ್ ಒಕ್ಕೂಟಕ್ಕೆ ಅಮೆರಿಕದ ಯಾವ ವಾದಗಳು ಅನ್ವಯಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಕೆಲವು ದೇಶಗಳು ತೈಲ ಖರೀದಿಯ ಪ್ರಮಾಣವನ್ನು ಹೆಚ್ಚಿಸಿಲ್ಲ. ಏಕೆಂದರೆ, ಇರಾನ್‌ನಿಂದ ತೈಲವನ್ನು ಖರೀದಿಸಿದ್ದಾರೆ. ಇದಕ್ಕೆ ಅಮೆರಿಕನ್ನರು ಸಹ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ಜೈಶಂಕರ್ ಹೇಳಿದರು.

ಅಲ್ಲದೇ, ಯುಎಸ್​​ ಮತ್ತು ಭಾರತದ ನಡುವೆ ಸ್ಪಷ್ಟ ಸಂಭಾಷಣೆಯ ಕೊರತೆ ಇದೆ. ಭಾರತದ ರಷ್ಯಾದೊಂದಿಗಿನ ತೈಲ ವ್ಯಾಪಾರದ ಬಗ್ಗೆ ಬಿಡೆನ್ ಆಡಳಿತಕ್ಕೆ ತಿಳಿದಿತ್ತು. ನಂತರ ಬೆಲೆ ಮಿತಿ ಜಾರಿಗೆ ಬಂದಿತು ಎಂದು ಜೈಶಂಕರ್​ ತಿಳಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ಮಧ್ಯಸ್ಥಿಕೆಗೆ ಸಂಬಂಧಿಸಿದ ವಿಷಯಕ್ಕೆ ಬಂದಾಗ, ಭಾರತ ಸರ್ಕಾರವು ಯಾವುದೇ ದೇಶದ ಮಧ್ಯಸ್ಥಿಕೆಯನ್ನು ಸ್ವೀಕರಿಸುವುದಿಲ್ಲ ಜೈಶಂಕರ್​ ಸ್ಪಷ್ಟಪಡಿಸಿದ್ದಾರೆ.(ಏಜೆನ್ಸೀಸ್​)