ನ್ಯೂಸ್

ಮದುವೆಯಾದ 12 ದಿನದಲ್ಲೇ ಸಾವನ್ನಪ್ಪಿದ 10 ವರ್ಷದ ಬಾಲಕಿ

ಅಮೆರಿಕ: ಸಾವು-ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ 10 ವರ್ಷದ ಬಾಲಕಿಯೊಬ್ಬಳು, ಸಾಯುವ ಕೆಲವೇ ದಿನಗಳ ಮೊದಲು ತನ್ನ ಬಾಲ್ಯದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಎಮ್ಮಾ ಎಡ್ವರ್ಡ್ಸ್ ತಾನು ಸಾಯುವ ಕೇವಲ 12 ದಿನಗಳ ಮೊದಲು ಡೇನಿಯಲ್ ಮಾರ್ಷಲ್ ಕ್ರಿಸ್ಟೋಫರ್ "ಡಿಜೆ" ವಿಲಿಯಮ್ಸ್‌ನೊಂದಿಗೆ ಮದುವೆಯಾಗಿದ್ದಾಳೆ.

ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಅಲೀನಾ (ಅಲಿನಾ) ಮತ್ತು ಆರನ್ ಎಡ್ವರ್ಡ್ಸ್ (ಆರನ್ ಎಡ್ವರ್ಡ್ಸ್) ದಂಪತಿಯ, ಎಮ್ಮಾ ಎಡ್ವರ್ಡ್ಸ್ ಎಂಬ 10 ವರ್ಷದ ಮಗಳಿಗೆ ಕ್ಯಾನ್ಸರ್ ಇದೆ ಎನ್ನುವ ವಿಚಾರ ಗೊತ್ತಾಯಿತ್ತು. ಮಗುವನ್ನು ಉಳಿಸಲು ದುಬಾರಿ ಚಿಕಿತ್ಸೆ ನೀಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಎಮ್ಮಾ ಎಡ್ವಡ್ಸ್​​​ ಹೆಚ್ಚು ಬದುಕುವುದಿಲ್ಲ ಎಂದು ವೈದ್ಯರು ಹೇಳಿದಾಗ ಪೋಷಕರು ಎದೆಗುಂದಿದರು. ಬೇರೆ ದಾರಿಯಿಲ್ಲವೆಂದು ಮಗಳನ್ನು ಸ್ವಲ್ಪ ದಿನ ಸುಖವಾಗಿಡಲು ಬಯಸಿದ್ದರು.

ಮಗಳು ಈ ಹಿಂದೆ ಹಲವಾರು ಬಾರಿ ತನ್ನನ್ನು ಮದುವೆ ಮಾಡುವಂತೆ ಕೇಳುತ್ತಿದ್ದಳು. ಅದನ್ನು ಕೇಳಿ ತಂದೆ-ತಾಯಿ ಏನೋ ತಮಾಷೆಯಾಗಿ ನಗುತ್ತಿದ್ದರು. ಅವರು ಅದೇ ವಿಷಯವನ್ನು ನಿಜ ಮಾಡಲು ಬಯಸಿದ್ದರು. ಆದರೆ ಈ ಬಾಲಕಿಯನ್ನು ಮದುವೆಯಾಗಲು ಯಾರು ಮುಂದೆ ಬರುತ್ತಾರೆಂದು ಯೋಚಿಸಿದ ಪೋಷಕರು ಅವಳ ಸ್ನೇಹಿತರನ್ನೇ ಒಪ್ಪಿಸಿ ಮದುವೆಗೆ ಸಿದ್ಧತೆ ಮಾಡಿದರು.

ಕಳೆದ ತಿಂಗಳು ಅಂದರೆ ಜೂನ್ 29 ರಂದು ಇಬ್ಬರಿಗೂ ಸಂಬಂಧಿಕರ ಸಮ್ಮುಖದಲ್ಲಿ ವಿವಾಹ ನೆರವೇರಿತ್ತು. ಎಮ್ಮಾ ಮದುವೆಯಲ್ಲಿ ಸಂತೋಷವಾಗಿದ್ದಳು. ಮದುವೆಯಾದ 12 ದಿನಗಳ ನಂತರ, ಪರಿಸ್ಥಿತಿ ಹದಗೆಟ್ಟಿತು ಮತ್ತು ಆಕೆ ಕಣ್ಣು ಮುಚ್ಚಿದಳು. ಮಗಳ ಸಾವಿನೊಂದಿಗೆ ಪೋಷಕರ ದುಃಖಕ್ಕೆ ಕೊನೆಯಿಲ್ಲ, ಆದರೆ ತಮ್ಮ ಮಗುವಿನ ಕೊನೆಯ ಆಸೆಯನ್ನು ಪೂರೈಸಿದ ಭಾವನೆ ಅವರಲ್ಲಿದೆ.

ಎಮ್ಮಾ ಅವರ ತಾಯಿ ಮಾತನಾಡಿ, “10 ವರ್ಷ ವಯಸ್ಸಿನ ಮಕ್ಕಳು ಸಾಮಾನ್ಯವಾಗಿ ಮೋಜು ಮಾಡಲು ಬಯಸುತ್ತಾರೆ. ಆದರೆ ನನ್ನ ಮಗಳು ಮದುವೆಯಾಗುವುದಾಗಿ ಹೇಳುತ್ತಿದ್ದಳು. ಹಾಗಾಗಿಯೇ ಕೊನೆಯ ದಿನಗಳಲ್ಲೂ ಅವರನ್ನು ಖುಷಿಯಾಗಿಡಲು ಮದುವೆ ಏರ್ಪಡಿಸಿದ್ದೆವು' ಎಂದು ಅಲೀನಾ ತಮ್ಮ ದುಃಖವನ್ನು ತೋಡಿಕೊಂಡರು.

ತಮ್ಮ ಕಣ್ಣೆದುರೇ ಮಕ್ಕಳು ಸಾಯುವುದನ್ನು ಕಂಡರೆ ಯಾವ ಪೋಷಕರಿಗೂ ಅದಕ್ಕಿಂತ ದೊಡ್ಡ ದುಃಖ ಮತ್ತೊಂದಿಲ್ಲ ಎನ್ನುತ್ತಾರೆ ನೆಟ್ಟಿಗರು.