ನ್ಯೂಸ್

US Election Results| ಭಾರತ ಮೂಲದ ಸುಹಾಸ್ ಸುಬ್ರಹ್ಮಣ್ಯಂ ಆಯ್ಕೆ

ಅಮೆರಿಕ: ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ (US Election Results) ಭಾರತ ಮೂಲದ ಸುಹಾಸ್ ಸುಬ್ರಹ್ಮಣ್ಯಂ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟಿಕ್ಟ್ ಆಯ್ಕೆಯಾಗುವ ಮೂಲಕ ಇತಿಹಾಸ ಬರೆದಿದ್ದಾರೆ.

ಡೆಮಾಕ್ರಟಿಕ್ ಭದ್ರಕೋಟೆಯಾದ ವರ್ಜೀನಿಯಾದಿಂದ ಸುಹಾಸ್ ಸುಬ್ರಹ್ಮಣ್ಯಂ ರಿಪಬ್ಲಿಕನ್ ಪಕ್ಷದ ಮೈಕ್ ಕ್ಲಾನ್ಸಿ ಅವರನ್ನು ಸೋಲಿಸಿ ಆಯ್ಕೆಯಾದ ಮೊದಲ ಭಾರತೀಯ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಡೆಮಾಕ್ರಟಿಕ್ ಭದ್ರಕೋಟೆಯಾದ ವರ್ಜೀನಿಯಾದಿಂದ ಜನಪ್ರತಿನಿಧಿಗಳ ಸಭೆಯಿಂದ (ಕಾಂಗ್ರೆಸ್​) ಸುಹಾಸ್ ಸುಬ್ರಹ್ಮಣ್ಯಂ ಸ್ಫರ್ಧಿಸಿದ್ದರು.

ಗೆಲುವಿನ ಕುರಿತು ಮಾತನಾಡಿರುವ ಸುಹಾಸ್ ಸುಬ್ರಹ್ಮಣ್ಯಂ, ಕಾಂಗ್ರೆಸ್‌ನಲ್ಲಿ ಕಠಿಣ ಹೋರಾಟಗಳನ್ನು ನಡೆಸಲು ಮತ್ತು ಜನರ ಪರವಾಗಿ ಫಲಿತಾಂಶಗಳನ್ನು ನೀಡಲು ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ವರ್ಜೀನಿಯಾದ 10ನೇ ಕಾಂಗ್ರೆಷನಲ್ ಡಿಸ್ಟಿಕ್ಟ್ ಜನರಿಗೆ ಋಣಿಯಾಗಿದ್ದೇನೆ. ಇಲ್ಲಿನ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ನಮ್ಮ ಕುಟುಂಬಕ್ಕೆ ವೈಯಕ್ತಿಕವಾದವುಗಳು. ಈ ಜಿಲ್ಲೆಗೆ ಸೇವೆ ಸಲ್ಲಿಸಲು ನನಗೆ ಸಿಕ್ಕ ಸದಾವಕಾಶ ಇದಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.