ಮುಂಬೈ: ಹಿಂದಿ ಕಿರುತೆರೆ ನಟಿ, ಹಿಂದಿ ಬಿಗ್ಬಾಸ್ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್ ತನ್ನ ಡ್ರೆಸ್ಸಿಂಗ್ನಿಂದಲೇ ಫೇಮಸ್. ಉರ್ಫಿ ಜಾವೇದ್ ಧರಿಸುವ ಬಟ್ಟೆ ಚಿತ್ರ ವಿಚಿತ್ರವಾಗಿರುತ್ತದೆ. ಆದರೆ ಇದೀಗ ಊರ್ಫಿ ಬೇಸಿಗೆ ವಾತಾವರಣಕ್ಕೆ ತಕ್ಕಂತ ಡ್ರೆಸ್ ತೊಟ್ಟು ಬಂದಿದ್ದಾರೆ.
ಬೇಸಿಗೆ ಬಿಸಿಲಿಗೆ ಜನ ಹೈರಾಣಾಗಿದ್ದಾರೆ. ತಂಪು ಪಾನಿಯಾ, ಐಸ್ಕ್ರೀಮ್, ಜ್ಯೂಸ್ , ಕೂಲರ್, ಫ್ಯಾನ್ ಮೊರೆ ಹೋಗಿದ್ದಾರೆ. ಆದರೆ ಊರ್ಫಿ ಮಾತ್ರ ಕೊಂಚ ವಿಭಿನ್ನವಾಗಿ ಯೋಚಿಸಿ ಫ್ಯಾನ್ನನ್ನೇ ಡ್ರೆಸ್ ಮಾಡಿಕೊಂಡು ಸಖತ್ ಕೂಲ್ ಆಗುವ ಮೂಲಕವಾಗಿ ಸುದ್ದಿಯಾಗಿದ್ದಾಳೆ.
ಕಪ್ಪು ಬಣ್ಣದ ಡ್ರೆಸ್ ಧರಿಸಿರುವ ಊರ್ಫಿ ಜಾವೇದ್ ಎದೆಯ ಭಾಗದಲ್ಲಿ ಫ್ಯಾನ್ಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಫ್ಯಾನ್ಗಳಿಗೆ ಬ್ಯಾಟರಿ ಕನೆಕ್ಷನ್ ನೀಡಲಾಗಿದ್ದು, ಆನ್ ಮಾಡಿದ ತಿರುಗುತ್ತವೆ. ಒಟ್ಟಿನಲ್ಲಿ ಈ ಡ್ರೆಸ್ನಲ್ಲಿ ಕ್ರೇಜಿಯಾಗಿ ಕಾಣುತ್ತಿದ್ದಾರೆ. ಸದ್ಯ ಊರ್ಫಿ ಜಾವೇದ್ ಅವರ ಈ ವಿಚಿತ್ರ ಡ್ರೆಸ್ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ನೆಟ್ಟಿಗರು ಬೇಸಿಗೆ ಕಾಲಕ್ಕೆ ಉತ್ತಮ ಡ್ರೆಸ್ ಎಂದು ಹೇಳಿದ್ದಾರೆ.
ಡ್ರೆಸ್ಸಿಂಗ್ ಸೆನ್ಸ್ ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಕ್ಕೆ ಕೆಲವರು ಟ್ರೋಲ್ ಮಾಡಿದರೆ, ಕೆಲವರು ಅವರು ಡ್ರೆಸ್ಗಳಲ್ಲಿ ಮಾಡುವ ಹೊಸ ಪ್ರಯೋಗವನ್ನು ಮೆಚ್ಚಿದ್ದಾರೆ.
ನಟಿ ಟ್ರೋಲ್ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ನಟಿ ಪ್ರತಿಬಾರಿ ಹೊಸ ಕ್ರಿಯೇಟಿವ್ ಡ್ರೆಸ್ ಧರಿಸಿದಾಗಲೂ ಟ್ರೋಲ್ ಆಗುತ್ತಾರೆ. ಎಲ್ಲರೂ ನಟಿಯನ್ನು ಇನ್ಸ್ಟಾಗ್ರಾಮ್ನಲ್ಲಿಯೂ ಟ್ರೋಲ್ ಮಾಡುತ್ತಾರೆ. ಆದರೆ ನಟಿ ಇದಕ್ಕೆಲ್ಲಾ ಕೇರ್ ಮಾಡುವುದಿಲ್ಲ.