ನ್ಯೂಸ್

ಯುಪಿಎಸ್​ಸಿ- ಸಿಎಂಎಸ್ 2020 ಪರೀಕ್ಷೆ : ಅಧಿಸೂಚನೆ ಪ್ರಕಟಣೆ ದಿನಾಂಕ ಮುಂದೂಡಿಕೆ

sspmiracle1982

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಕಂಬೈನ್ಡ್ ಮೆಡಿಕಲ್ ಸರ್ವೀಸಸ್ ಪರೀಕ್ಷೆ ( ಯುಪಿಎಸ್​ಸಿ ಸಿಎಂಎಸ್ ಪರೀಕ್ಷೆ 2020) ಅಧಿಸೂಚನೆ ಪ್ರಕಟಣೆಯ ದಿನಾಂಕನ್ನು ಜುಲೈ 29 ಕ್ಕೆ ಮುಂದೂಡಿದೆ.

ಈ ಮೊದಲು ಜುಲೈ 22 ರಂದು ಪ್ರಕಟಿಸಲು ನಿರ್ಧರಿಸಿತ್ತು.

ಆ ಕಾರ್ಯಪಟ್ಟಿ ಪ್ರಕಾರ, ಅಧಿಸೂಚನೆಯನ್ನು ಜುಲೈ 22 ರಂದು ಬಿಡುಗಡೆ ಮಾಡಿ, ಆಗಸ್ಟ್ 11 ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಅಕ್ಟೋಬರ್ 22 ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು.

ಯುಪಿಎಸ್ಸಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಸಿಎಮ್ಎಸ್ ಪರೀಕ್ಷೆಯ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಜುಲೈ ತಿಂಗಳಲ್ಲಿ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ, ಈ ವರ್ಷ ಕೋವಿಡ್ -19 ದಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ.