ಬೆಂಗಳೂರು: ದೇಶದ ಅತ್ಯುನ್ನತ ಪರೀಕ್ಷೆಯಾದ ಯುಪಿಎಸ್ಸಿ 2019ನೇ ಸಾಲಿನ ಫಲಿತಾಂಶ ಇಂದು (ಮಂಗಳವಾರ) ಪ್ರಕಟವಾಗಿದ್ದು, ಕರ್ನಾಟಕದಿಂದ 38ಕ್ಕೂ ಹೆಚ್ಚು ಮಂದಿ ಪಾಸ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ರಾಜ್ಯದಿಂದ 23 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದರು. ಈ ಬಾರಿ ಉತ್ತೀರ್ಣರಾಗಿರುವ ಪ್ರಮಾಣ ಸ್ವಲ್ಪ ಹೆಚ್ಚಳವಾಗಿದೆ. ದೇಶಕ್ಕೆ 71ನೇ ರ‍್ಯಾಂಕ್ ಪಡೆದಿರುವ ಬಿ.ಯಶಸ್ವಿನಿ ಕರ್ನಾಟಕಕ್ಕೆ ಟಾಪರ್. ಆದರೆ, ಇಡೀ ದೇಶಕ್ಕೆ ಪುರುಷ ಅಭ್ಯರ್ಥಿಗಳಲ್ಲಿ ಪ್ರದೀಪ್ ಸಿಂಗ್ ಹಾಗೂ ಮಹಿಳಾ ಅಭ್ಯರ್ಥಿಗಳಲ್ಲಿ ಪ್ರತಿಭಾ ವರ್ಮಾ ಟಾಪರ್ಸ್ಗಳಾಗಿ ಹೊರಹೊಮ್ಮಿದ್ದಾರೆ.
2019ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಕರ್ನಾಟಕ ಸಾಧಕರ ಪಟ್ಟಿ ಹೀಗಿದೆ. ಬಿ.ಯಶಸ್ವಿನಿ- 73ನೇ ರ‍್ಯಾಂಕ್, ಎಚ್.ವಿನೋದ್ ಪಾಟೀಲ್- 132, ಎಚ್.ಎಸ್. ಕೀರ್ತನಾ- 167, ಎಸ್. ಸಚಿನ್ ಹಿರೇಮಠ್- 213, ಹೇಮಾ ನಾಯಕ್- 225, ಎಂ.ಜೆ. ಅಭಿಷೇಕ್ ಗೌಡ- 278, ಬಿ.ಕೃತಿ- 297, ವೆಂಕಟಕೃಷ್ಣ- 336, ಎಚ್.ಎನ್. ಮಿಥುನ್- 359, ವೆಂಕಟರಾಮನ್ ಕಾವಡಿಕೆರೆ- 363, ಎಚ್.ಆರ್. ಕೌಶಿಕ್- 380, ಬಿ.ಆರ್. ವರುಣ್- 395, ಆರ್.ಮಂಜುನಾಥ್- 406, ಬಿ.ಸಿ. ಹರೀಶ್- 409, ಜಗದೀಶ್ ಅಡಹಳ್ಳಿ- 440, ಎಚ್.ಬಿ.ವಿವೇಕ್- 444, ಆನಂದ್ ಕಲ್ಲಾದಗಿ- 446, ಮೊಹಮ್ಮದ್ ನದಿಮುದ್ದಿನ್- 461, ಕೆ.ಟಿ. ಮೇಘನಾ- 465, ಸೈಯದ್ ಜಾಹಿದ್ ಅಲಿ- 476, ಎನ್.ವಿವೇಕ್ ರೆಡ್ಡಿ- 485, ಎಂ.ಡಿ.ಕಮ್ಮಾರುದ್ಧಿನ್ ಖಾನ್- 511, ವರುಣ್ ಕೆ.ಗೌಡ- 528, ಫ್ರಫುಲ್ ದೇಸಾಯಿ- 532(ಬೆಳಗಾವಿ), ಎನ್.ರಾಘವೇಂದ್ರ- 536, ಕೆ.ಆರ್.ಭರತ್- 545, ಪೃಥ್ವಿ ಎಸ್.ಹುಲ್ಲತ್ತಿ- 582, ಆರ್.ಸುಹಾಸ್- 583, ಅಭಿಲಾಶ್ ಶಶಿಕಾಂತ್ ಬಡ್ಡೂರ್- 591, ಎಚ್.ಜಿ.ದರ್ಶನ್ ಕುಮಾರ್ 594, ಸವಿತಾ ಗೊತ್ಯಾಲ್- 626, ಪ್ರಜ್ವಲ್- 636, ರಮೇಶ್- 646, ಗಜಾನನ ಬಾಲೆ- 663, ಪ್ರಿಯಾಂಕ ಕಾಂಬ್ಳಿ- 670, ಎ.ಎಂ.ಚೈತ್ರಾ- 713, ಜಿ.ಎಸ್. ಚಂದನ್- 777, ಎ.ಪಿ.ಮಂಜೇಶ್ ಕುಮಾರ್ 800ನೇ ರ‍್ಯಾಂಕ್ ಪಡೆದಿದ್ದಾರೆ.
ವಿವಿಧ ನಾಗರಿಕ ಸೇವೆಗಳಿಗೆ ಒಟ್ಟು 829 ಅಭ್ಯರ್ಥಿಗಳು 2019ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, ಅಂತಿಮ ಫಲಿತಾಂಶವನ್ನು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು. ಯುಪಿಎಸ್ಸಿ ಸಾಧಕರಿಗೆ 'ವಿಜಯವಾಣಿ' ಶುಭಹಾರೈಸಿದೆ.