ಉತ್ತರಪ್ರದೇಶ: ಉತ್ತರ ಪ್ರದೇಶದ ಕಾನ್‌ಸ್ಟೆಬಲ್ ಒಬ್ಬರು ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ನಂತರ ಅಮಾನತುಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಕುರಿತು ದೂರುಗಳು ಬಂದ ನಂತರ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಬಾಲಿವುಡ್ ಸ್ಟೈಲ್ನಲ್ಲಿ ಬೈಕ್ ಸ್ಟಂಟ್: ನವಜೋಡಿಯ ವಿಭಿನ್ನ ಪ್ರೀ ವೆಡ್ಡಿಂಗ್ ಫೋಟೋಶೂಟ್ ವಿಡಿಯೋ ವೈರಲ್
ವಿಡಿಯೋದಲ್ಲಿ ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಚೌಬೆ ಅವರು ಸಮವಸ್ತ್ರ ಧರಿಸಿ ರೇಸಿಂಗ್ ಬೈಕ್‌ನಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೋ ಜೊತೆಗೆ ‘ನಿನ್ನ ಶತ್ರುಗಳಿಗೆ ಹೆದರುವುದಿಲ್ಲವೇ’ ಎಂದು ಹುಡುಗಿಯೊಬ್ಬಳು ಆತನನ್ನು ಕೇಳುವ ಡೈಲಾಗ್ ಕೂಡ ಸೇರಿಸಿದ್ದಾರೆ. ಅದಕ್ಕೆ ಅವರು, "ಶತ್ರುಗಳಿಗೆ ಭಯವೇಕೆ...ಸಾವು ಎಂದರೇನು...ಇವತ್ತಲ್ಲದಿದ್ದರೆ ನಾಳೆ ಸಾಯುತ್ತೇವೆ. ನೀವು ಭಯಪಡಬೇಕಾದರೆ ದೇವರಿಗೆ ಭಯಪಡಬೇಕು. ಕೀಟಗಳಿಗೆ ಮತ್ತು ಜೇಡಗಳಿಗೆ ಏಕೆ ಭಯಪಡಬೇಕು?" ಎಂಬ ಡೈಲಾಗ್ ಸೇರಿಸಿದ್ದಾರೆ
ಎಸ್‌ಎಸ್‌ಪಿ ಡಾ.ಗೌರವ್ ಗ್ರೋವರ್, ಫೆಬ್ರವರಿ 8 2023 ರಂದು ಯಾವುದೇ ಉತ್ತರ ಪ್ರದೇಶ ಪೊಲೀಸ್ ಸಿಬ್ಬಂದಿ ಖಾಸಗಿ ಫೋಟೋಗಳು ಅಥವಾ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಬಾರದು ಎಂಬ ನಿರ್ದೇಶನವನ್ನು ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.
“ಈ ನಿರ್ದೇಶನದ ಹೊರತಾಗಿಯೂ, ಕಾನ್‌ಸ್ಟೆಬಲ್ ಸಂದೀಪ್ ಕುಮಾರ್ ಚೌಬೆ ಅವರು ತಮ್ಮ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಆದೇಶವನ್ನು ಉಲ್ಲಂಘಿಸಿದ್ದಾರೆ. ಇಂತಹ ಕ್ರಮಗಳು ಶಿಸ್ತಿನ ಕೊರತೆಯ ಪ್ರತೀಕವಾಗಿದ್ದು, ಇದರ ಪರಿಣಾಮವಾಗಿ ಕಾನ್ಸ್‌ಟೇಬಲ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.(ಏಜೆನ್ಸೀಸ್)