ನ್ಯೂಸ್

ಭದ್ರಾ ನಾಲೆಯಲ್ಲಿ ಅನಾಮಿಕ ವ್ಯಕ್ತಿಯ ಶವ ಪತ್ತೆ; ಗುರುತು ಪತ್ತೆಗೆ ಫಲಕ ಬಿಡುಗಡೆ ಮಾಡಿದ ಪೊಲೀಸರು…

Webdesk - Athul Damale

ದಾವಣಗೆರೆ: ಭದ್ರಾ ನಾಲೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆಯಾಗಿದ್ದು ಅದರ ಗುರುತು ಪತ್ತೆಗಾಗಿ ಪೊಲೀಸರು ಫಲಕ ಬಿಡುಗಡೆ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಬಳಿ ನಿಟ್ಟೂರು ಗ್ರಾಮದ 9B ಭದ್ರಾ ಉಪನಾಲೆಯಲ್ಲಿ ಶವ ಪತ್ತೆಯಾಗಿದ್ದು ಅನೇಕ ಸಮಯದಿಂದ ಮೃತದೇಹ ನೀರಿನಲ್ಲಿದ್ದ ಕಾರಣ ಜಲಚರಗಳು ಮೃತದೇಹವನ್ನು ತಿಂದು ಹಾಕಿವೆ. ಮೃತದೇಹ ಗಂಡಿನದ್ದೋ ಹೆಣ್ಣಿನದ್ದೋ ಎಂದೂ ತಿಳಿದು ಬಂದಿಲ್ಲ.

ಶವ ಕೊಳೆತ ಸ್ಥಿತಿಯಲ್ಲಿ ಇರುವುದರಿಂದ ಇನ್ನೂ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಶವದ ಗುರುತು ಪತ್ತೆಗಾಗಿ ಪೊಲೀಸರು ಫಲಕ ಬಿಡುಗಡೆ ಮಾಡಿದ್ದಾರೆ. ಈ ಘಟನರ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.