ಪ್ಯಾರಿಸ್: ಟೆಲಿಗ್ರಾಮ್‌ನ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಅವರನ್ನು ಮೆಸೇಜಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಆಪಾದಿತ ಅಪರಾಧಗಳ ಮೇಲೆ ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು. ಈ ಬಂಧನದ ಹಿಂದೆ ಅಮೆರಿಕದ ಕೈವಾಡವಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಸಲಹೆಗಾರ ಮಂಗಳವಾರ (ಆಗಸ್ಟ್ 27) ಆರೋಪಿಸಿದ್ದಾರೆ.
ಮಕ್ಕಳ ಅಶ್ಲೀಲ ವಿಷಯ, ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಪ್ಲಾಟ್‌ಫಾರ್ಮ್‌ನಲ್ಲಿ ನಕಲಿ ವಹಿವಾಟುಗಳನ್ನು ಒಳಗೊಂಡ ಅಪರಾಧಗಳ ತನಿಖೆಯ ಭಾಗವಾಗಿ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಫ್ರೆಂಚ್ ಸರ್ಕಾರ ಸೋಮವಾರ(ಆಗಸ್ಟ್ 26) ತಿಳಿಸಿದೆ.
ಫ್ರಾನ್ಸ್ ಮೂಲಕ ಟೆಲಿಗ್ರಾಮ್ ಮೇಲೆ ಅಮೆರಿಕ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ರಷ್ಯಾ ಮೂಲದ ಪಾವೆಲ್ ಡುರೊವ್ ಬಂಧನಕ್ಕೆ ಯುನೈಟೆಡ್ ಸ್ಟೇಟ್ಸ್ ಹೊಣೆಗಾರರಾಗಿದ್ದಾರೆ ಎಂದು ರಷ್ಯಾದ ಸ್ಟೇಟ್ ಡುಮಾದ ಮುಖ್ಯಸ್ಥ ವ್ಯಾಚೆಸ್ಲಾವ್ ವೊಲೊಡಿನ್ ಆರೋಪಿಸಿದ್ದಾರೆ.
ಅಮೆರಿಕದ ಯಾವುದೇ ಪ್ರಭಾವ ಹೊಂದಿರದ ಹಾಗೂ ಕೆಲವೇ ಕೆಲವು ಅತಿದೊಡ್ಡ ಇಂಟರ್ನೆಟ್ ಪ್ಲಾಟ್ಫಾರ್ಮ್ಗಳಲ್ಲಿ ಟೆಲಿಗ್ರಾಮ್ ಒಂದಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಧ್ಯಕ್ಷ ಜೋಬಿಡೆನ್ ಟೆಲಿಗ್ರಾಮ್ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ಯಾವುದೇ ಪುರಾವೆಗಳಿಲ್ಲದೆ ವೊಲೊಡಿನ್ ಆರೋಪಿಸಿದ್ದಾರೆ.
ಟೆಲಿಗ್ರಾಮ್ ಸಂಸ್ಥಾಪಕನ ಬಂಧನಕ್ಕೂ ಫ್ರೆಂಚ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನಡೆಯುತ್ತಿರುವ ನ್ಯಾಯಾಂಗ ವಿಚಾರಣೆಯ ಪರಿಣಾಮವಾಗಿ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು.ಇದು ಯಾವುದೇ ರೀತಿಯಲ್ಲಿ ರಾಜಕೀಯ ನಿರ್ಧಾರವಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನ ಸಿಇಒ ಪಾವೆಲ್ ಡುರೊವ್ ಅವರನ್ನುಪ್ಯಾರಿಸ್ ಬಳಿಯ ಲೆಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಶನಿವಾರ (ಆಗಸ್ಟ್ 24) ಬಂಧಿಸಲಾಗಿದೆ. (ಏಜೆನ್ಸೀಸ್)