ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಸಂಸದ ಪ್ರತಾಪ್ ಸಿಂಹ ಅವರ ಮಗಳಿಗೆ ತಮ್ಮ ಕುರ್ಚಿ ಬಿಟ್ಟು ಕೊಟ್ಟ ಪ್ರಸಂಗ ನಡೆದಿದೆ.
ಕಾರ್ಯ ನಿಮಿತ್ತ ಇಂದು ನವದೆಹಲಿಯಲ್ಲಿ ಸ್ಮೃತಿ ಇರಾನಿ ಅವರ ಕಚೇರಿಗೆ ತಮ್ಮ ಪುಟ್ಟ ಮಗಳು ವಿಪಂಚಿ ಸಿಂಹ ಅವಳೊಟ್ಟಿಗೆ ತೆರಳಿದ್ದ ಸಂಸದ ಪ್ರತಾಪ್ ಸಿಂಹ ಅವರು ಇರಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇದೇ ವೇಳೆ ಪ್ರತಾಪ್ ಸಿಂಹ ಅವರ ಮಗಳನ್ನು ಕಂಡು ಮುದ್ದಿನಿಂದ ಮಾತನಾಡಿಸಿದ ಸ್ಮೃತಿ ಇರಾನಿ, ತಮ್ಮ ಕುರ್ಚಿ ಮೇಲೆ ಮಗುವನ್ನು ಕೂರಿಸಿ ಸಂಭ್ರಮಿಸಿದ್ದಾರೆ. ಕೆಲ ಹೊತ್ತು ಮಾತನಾಡಿಸಿದ್ದಾರೆ.
ಇದಕ್ಕೆ ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರತಾಪ್ ಸಿಂಹ ಅವರು, ಸ್ಮೃತಿ ಇರಾನಿ ಅವರು ನನ್ನ ಮಗಳನ್ನು ಅವರ ಮಗಳಂತೆ ನೋಡಿ ಪ್ರೀತಿ ತೋರಿದರು. ಅವರ ವಿನಯಕ್ಕೆ ನಾನು ತಲೆಬಾಗುವೆ ಎಂದು ಟ್ವೀಟ್ ಮಾಡಿದ್ದಾರೆ.