ನ್ಯೂಸ್

ಕೃಷಿ ಉತ್ಪನ್ನಗಳಿಗೆ ಏಕರೂಪ ನೀತಿ; ಕೇಂದ್ರದ ಚಿಂತನೆ, ಕರಡು ನೀತಿ ಪ್ರಕಟಣೆ

ನವದೆಹಲಿ: ರೈತ ಸಮುದಾಯದ ತೀವ್ರ ಪ್ರತಿಭಟನೆಯಿಂದಾಗಿ ಸುಧಾರಣೆ-ಕೇಂದ್ರಿತ ಕೃಷಿ ಕಾನೂನುಗಳನ್ನು ವಾಪಸ್ ಪಡೆದ ಸುಮಾರು ಮೂರು ವರ್ಷದ ನಂತರ, ಕೇಂದ್ರ ಸರ್ಕಾರ ಈಗ ‘ಕೃಷಿ ಉತ್ಪನ್ನಗಳ ಏಕರೂಪದ ಮಾರುಕಟ್ಟೆಗಾಗಿ’ ಕರಡು ರಾಷ್ಟ್ರೀಯ ನೀತಿಯ ಚೌಕಟ್ಟನ್ನು ರೂಪಿಸಲು ಮುಂದಾಗಿದೆ. ಒಂದೇ ಪರವಾನಗಿ/ನೋಂದಣಿ ವ್ಯವಸ್ಥೆ ಮತ್ತು ಏಕ ಶುಲ್ಕದ ಮೂಲಕ ಇದನ್ನು ಸಾಧಿಸುವುದು ಸರ್ಕಾರದ ಚಿಂತನೆಯಾಗಿದೆ. ಎಲ್ಲ ವಿಭಾಗಗಳ ರೈತರಿಗೆ ಉತ್ತಮ ದರ ದೊರಕಲು ಅವರ ಆಯ್ಕೆಯ ಮಾರುಕಟ್ಟೆ ಲಭ್ಯತೆಯನ್ನು ಖಾತರಿಪಡಿಸುವುದು ಈ ನೀತಿಯ ಗುರಿಯಾಗಿದೆ.

ಕರಡು ನೀತಿ ಬಿಡುಗಡೆ: ಈ ಪ್ರಸ್ತಾಪಿತ ನೀತಿಯ ಕರಡನ್ನು ಕೃಷಿ ಸಚಿವಾಲಯ ಕಳೆದ ತಿಂಗಳು ಬಿಡುಗಡೆ ಮಾಡಿ ಸಂಬಂಧ ಪಟ್ಟವರಿಂದ ಸಲಹೆ ಸೂಚನೆಗಳನ್ನು ಕೋರಿದೆ. ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಮಾರುಕಟ್ಟೆ) ಫೈಜ್ ಅಹಮದ್ ಕಿದ್ವಾಯಿ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿಯೊಂದು ಈ ಕರಡನ್ನು ರೂಪಿಸಿದೆ.

ಏಕರೂಪ ಉದ್ದೇಶ: ಪ್ರಸ್ತಾಪಿತ ಕ್ರಮಗಳಲ್ಲಿ ಒಂದು ಅಥವಾ ಹಲವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿ) ಈಗಾಗಲೇ ಸೀಮಿತ ಅಥವಾ ಅಸಮಾನ ರೀತಿಯಲ್ಲಿ ಅಳ ವಡಿಸಿಕೊಂಡಿದ್ದರೂ ದೇಶದಾದ್ಯಂತ ಅವುಗಳಲ್ಲಿ ಏಕರೂಪತೆಯನ್ನು ತರುವುದು ಉದ್ದೇಶವಾಗಿದೆ.

ಜಿಎಸ್​ಟಿ ಮಾದರಿ ಸಮಿತಿ: ಅದಕ್ಕಾಗಿ, ಜಿಎಸ್​ಟಿ ಕರಿತ ಸಮಿತಿಯ ರೀತಿಯಲ್ಲೇ ರಾಜ್ಯಗಳ ಸಚಿವರನ್ನು ಒಳಗೊಂಡ ‘ಹೆಚ್ಚು ಅಧಿಕಾರ ಹೊಂದಿದ ಕೃಷಿ ಮಾರುಕಟ್ಟೆ ಸುಧಾರಣೆ ಸಮಿತಿ’ಯನ್ನು ರಚಿಸುವುದು ಸರ್ಕಾರದ ಉದ್ದೇಶವಾಗಿದೆ.

ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಶುರು: ಕೇಂದ್ರ ಸರ್ಕಾರವು ಒಂದು ರಾಷ್ಟ್ರ, ಒಂದು ಚಂದಾದಾರಿಕೆ (ಣಘಣಖ) ಉಪಕ್ರಮವನ್ನು ಬುಧವಾರ ಪ್ರಾರಂಭಿಸಿದೆ. ವಿಶ್ವದರ್ಜೆಯ ಸಂಶೋಧನೆ ಮತ್ತು ಶೈಕ್ಷಣಿಕ ಸಂಪನ್ಮೂಲಗಳು ಎಲ್ಲಾ ಸರ್ಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಿಂದ ವಿಶ್ವವಿದ್ಯಾನಿಲಯಗಳು, ಐಐಟಿಗಳು ಸೇರಿದಂತೆ ಸರ್ಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳ 1.8 ಕೋಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ವಿದ್ಯಾರ್ಥಿಗಳ ಜತೆಗೆ ಅಧ್ಯಾಪಕರು, ಸಂಶೋಧಕರಿಗೂ ಅನುಕೂಲವಾಗಲಿದೆ.

ಕಳೆದ ನವೆಂಬರ್ 25ರಂದು ಕೇಂದ್ರ ಸಚಿವ ಸಂಪುಟ ಈ ಯೋಜನೆಗೆ ಅನುಮೋದನೆ ನೀಡಿತ್ತು. ಅಂತರಾಷ್ಟ್ರೀಯ ನಿಯತಕಾಲಿಕಗಳು ಮತ್ತು ಲೇಖನಗಳು ಸುಲಭವಾಗಿ ವಿದ್ಯಾರ್ಥಿಗಳಿಗೆ ಸಿಗುವಂತಾಗಬೇಕು. ಭಾರತದ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯವನ್ನು ಜಾಗತಿಕ ಸಂಪನ್ಮೂಲಗಳೊಂದಿಗೆ ಸಜ್ಜುಗೊಳಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಗುಣಮಟ್ಟವನ್ನು ಹೆಚ್ಚಿಸುವುದು ಗುರಿಯಾಗಿದೆ.

2025 ರಕ್ಷಣಾ ಸುಧಾರಣೆ ವರ್ಷ: ಭಾರತ ಸರ್ಕಾರವು 2025ನ್ನು ರಕ್ಷಣಾ ಕ್ಷೇತ್ರದ ಸುಧಾರಣೆ ವರ್ಷ ಎಂದು ಘೋಷಣೆ ಮಾಡಿದೆ. ಸೇನೆಯ ಮೂರೂ ಪಡೆಗಳ ಶಕ್ತಿ ಹೆಚ್ಚಿಸಲು, ತಾಂತ್ರಿಕವಾಗಿ ಸುಧಾರಿತ ಮಟ್ಟಕ್ಕೆ ಪರಿವರ್ತಿಸಲು ಸಮಗ್ರ ಥಿಯೇಟರ್ ಕಮಾಂಡ್​ಗಳನ್ನು ರಚನೆ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ. ರಕ್ಷಣಾ ಸಚಿವಾಲಯವು ಈ ಬಗ್ಗೆ ಯೋಜನೆ ರೂಪಿಸಿದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಗಳನ್ನು ಸರಳ ಮತ್ತು ತ್ವರಿತಗೊಳಿಸುವುದು, ಪ್ರಮುಖ ಪಾಲುದಾರರ ನಡುವೆ ಸಮನ್ವಯತೆ ಖಚಿತಪಡಿಸುವುದು, ಅಸಮರ್ಥತೆಗಳನ್ನು ತೊಡೆದುಹಾಕುವುದು, ಸಂಪನ್ಮೂಲಗಳ ಬಳಕೆಯನ್ನು ಉತ್ತಮಗೊಳಿಸುವುದು ಪ್ರಮುಖ ಗುರಿಯಾಗಿದೆ. ರಕ್ಷಣಾ ಸನ್ನದ್ಧತೆಯಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲು ಈ ವರ್ಷದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಭಾರತದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯವಾಗಿದೆ ಎಂದು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಹೊಸ ಯೋಜನೆಯ ಪ್ರಕಾರ, ಪ್ರತಿ ಥಿಯೇಟರ್ ಕಮಾಂಡ್​ಗಳು ಸೈನ್ಯ ನೌಕಾಪಡೆ ಮತ್ತು ವಾಯುಪಡೆಯ ಘಟಕಗಳನ್ನು ಹೊಂದಿರುತ್ತದೆ. ಇವೆಲ್ಲವೂ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಭದ್ರತಾ ಸವಾಲುಗಳನ್ನು ಎದುರಿಸಲು ನೆರವಾಗುತ್ತವೆ. ಪ್ರಸ್ತುತ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಪ್ರತ್ಯೇಕ ಕಮಾಂಡ್​ಗಳನ್ನು ಹೊಂದಿವೆ. ಸೈಬರ್ ಮತ್ತು ಬಾಹ್ಯಾಕಾಶದಂತಹ ಹೊಸ ಡೊಮೇನ್​ಗಳು, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಹೈಪರ್​ಸಾನಿಕ್ ಮತ್ತು ರೊಬೊಟಿಕ್ಸ್​ನಂತಹ ತಂತ್ರಜ್ಞಾನಗಳತ್ತ ಗಮನ ಹರಿಸಲಾಗುವುದು. ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ.

ಭವಿಷ್ಯದ ಯುದ್ಧಗಳನ್ನು ಗೆಲ್ಲಲು ಅಗತ್ಯವಾದ ತಂತ್ರಗಳು, ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು, ತರಬೇತಿಗಳ ಮೂಲಕ ಕಾರ್ಯಾಚರಣೆಯ ಅವಶ್ಯಕತೆಗಳು ಮತ್ತು ಸಾಮರ್ಥ್ಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಪ್ರಮುಖ ಉದ್ದೇಶಗಳು: ಉನ್ನತ ಗುಣಮಟ್ಟದ ಸಂಶೋಧನಾ ಪ್ರಕಟಣೆಗಳು ಅಧ್ಯಯನಕ್ಕೆ ಸಿಗಲಿದೆ. ಭಾರತದ ಶೈಕ್ಷಣಿಕ ಸಮುದಾಯಗಳ ಸಂಶೋಧನಾ ಸಾಮರ್ಥ್ಯ ಹೆಚ್ಚಾಗಲಿದೆ. ್ಝ ಈ ಯೋಜನೆಯು ರಾಷ್ಟ್ರದಾದ್ಯಂತ ಕೋರ್ ಮತ್ತು ಅಂತರ್ ಶಿಸ್ತೀಯ ಸಂಶೋಧನೆಗಳನ್ನು ಉತ್ತೇಜಿಸುತ್ತದೆ. ್ಝ ಕೇಂದ್ರ ಸರ್ಕಾರದ ವಿಕಸಿತ ಭಾರತ ದೃಷ್ಟಿಕೋನಕ್ಕೆ ಈ ಯೋಜನೆ ಹೊಂದಿಕೆಯಾಗುತ್ತದೆ. ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಲು ಇದು ನೆರವಾಗುತ್ತದೆ.

ಮಾರುಕಟ್ಟೆ ಸುಧಾರಣೆಗೆ ಸಲಹೆ

  • ಖಾಸಗಿ ಸಗಟು ಮಾರ್ಕೆಟ್ ಸ್ಥಾಪನೆಗೆ ಅವಕಾಶ.
  • ಸಂಸ್ಕರಣೆದಾರರು, ರಫ್ತುದಾರರು, ಸಂಘಟಿತ ರೀಟೇಲರ್​ಗಳು, ಹೊಲಗಳಿಂದಲೇ ಸಗಟು ಖರೀದಿ ಮೊದಲಾದವುಗಳಿಗೆ ಅವಕಾಶ ಕೊಡುವುದು.
  • ಗೋದಾಮು/ಹಗೇವು, ಶೈತ್ಯಾಗಾರಗಳು ಡೀಮ್್ಡ ಮಾರ್ಕೆಟ್ ಎಂದು ಘೋಷಣೆ.
  • ಖಾಸಗಿ ಇ-ಟ್ರೇಡಿಂಗ್ ವೇದಿಕೆ ಸ್ಥಾಪನೆ ಮತ್ತು ಕಾರ್ಯಾಚರಣೆ.
  • ಎಲ್ಲ ರಾಜ್ಯಗಳಲ್ಲಿ ಏಕ ಬಾರಿಯ ಲೆವಿ.
  • ಮಾರುಕಟ್ಟೆ ಶುಲ್ಕ ಮತ್ತು ಕಮಿಷನ್ ಶುಲ್ಕಗಳ ಸುಧಾರಣೆ.