ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ನಗರ ಪ್ರದೇಶಗಳಲ್ಲಿ ಹದಿನೈದು ವರ್ಷಕ್ಕಿಂತ ಮೇಲಿನವರ ನಿರುದ್ಯೋಗ ಪ್ರಮಾಣ ಶೇ. 6.4ಕ್ಕೆ ಇಳಿದಿದೆ ಎಂದು ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ (ಎನ್ಎಸ್ಎಸ್ಒ) ತಿಳಿಸಿದೆ.
2023-24ರ ಆರ್ಥಿಕ ವರ್ಷದ ಡಿಸೆಂಬರ್ ತ್ರೖೆಮಾಸಿಕದಲ್ಲಿ ನಿರುದ್ಯೋಗ ಪ್ರಮಾಣ ಶೇ. 6.5ರಷ್ಟಿತ್ತು. 2024-25ರ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ಇದು 6.4ರಷ್ಟಿತ್ತು ಎಂದು ಎನ್ಎಸ್ಎಸ್ಒ ನಡೆಸಿದ 25ನೇ ಆವರ್ತಕ ಕಾರ್ವಿುಕ ಸಂಖ್ಯೆ ಸಮೀಕ್ಷೆ ಹೇಳಿದೆ. 15 ವರ್ಷಕ್ಕಿಂತ ಮೇಲ್ಪಟ್ಟ ನಗರ ಪ್ರದೇಶದ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ 2024ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೖೆಮಾಸಿಕದಲ್ಲಿ ಶೇ. 8.1ಕ್ಕೆ ಇಳಿದಿದೆ.
ಅದರ ಹಿಂದಿನ ವರ್ಷದ ಇದೇ ಅವಧಿಯಲ್ಲಿ ಇದು ಶೇ. 8.6ರಷ್ಟಿತ್ತು. 2024ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಇದು ಶೇ. 8.4ರಷ್ಟಿತ್ತು. ನಗರ ಪ್ರದೇಶಗಳ ಪುರುಷರಲ್ಲಿ 2024ರ ಅಕ್ಟೋಬರ್ ನಿಂದ ಡಿಸೆಂಬರ್ವರೆಗಿನ ತ್ರೖೆಮಾಸಿಕ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ. 5.8ರಷ್ಟಿತ್ತು. 2024ರ ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಇದು ಶೇ. 5.7ರಷ್ಟಿತ್ತು ಎಂದು ಸಮೀಕ್ಷಾ ವರದಿಯಲ್ಲಿ ವಿವರಿಸಲಾಗಿದೆ.