ನ್ಯೂಸ್

ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ತಮ್ಮನ ಮಗ ಪಾಕ್​ಗೆ ಪರಾರಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಕಿರಿಯ ತಮ್ಮ ನೂರಾ ಎಂಬಾತನ ಮಗ ಸೊಹೈಲ್ ಕಸ್ಕರ್ ಅಮೆರಿಕದಿಂದ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾನೆ.

ನಾರ್ಕೆ ಟೆರರ್ ಕೇಸ್ ಸಂಬಂಧಿಸಿ ಅಮೆರಿಕದ ಭದ್ರತಾ ಏಜೆನ್ಸಿಗಳ ಕಸ್ಟಡಿಯಲ್ಲಿದ್ದ ಸೊಹೈಲ್ ಕಸ್ಕರ್​ನನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂಬ ಮನವಿಯನ್ನು ಭಾರತ ಸರ್ಕಾರ ಮಾಡಿತ್ತು. ಮುಂಬೈ ಪೊಲೀಸರು ಈ ನಿಟ್ಟಿನಲ್ಲಿ ಅಮೆರಿಕದ ಭದ್ರತಾ ಏಜೆನ್ಸಿಗಳ ಜತೆಗೆ ಸಂಪರ್ಕದಲ್ಲಿದ್ದರು. ಆದಾಗ್ಯೂ, ಆತ ಅಲ್ಲಿಂದ ಯಾವ ರೀತಿ ಪರಾರಿಯಾದ ಎಂಬ ಅಂಶ ಬೆಳಕಿಗೆ ಬಂದಿಲ್ಲ.

ದುಬೈ ಮೂಲಕ ಪಾಕಿಸ್ತಾನ ತಲುಪಿದ್ದು ಖಚಿತವಾಗಿದೆ. ಇತ್ತೀಚೆಗೆ ಆತನ ಧ್ವನಿ ಇಂಟರ್​ಸೆಪ್ಟರ್ ಮೂಲಕ ಭದ್ರತಾಪಡೆಗಳಿಗೆ ಸಿಕ್ಕಿದ್ದು, ಅದು ಪಾಕಿಸ್ತಾನದಿಂದ ಹೊರಟ ತರಂಗಾಂತರದಲ್ಲಿತ್ತು ಎಂಬುದು ಖಚಿತವಾಗಿದೆ. ಸೊಹೈಲ್ ಕಸ್ಕರ್ ಅನ್ನು ನಾರ್ಕೆ ಟೆರರಿಸಂ ಕೇಸ್​ನಲ್ಲಿ 2014ರಲ್ಲಿ ಸ್ಪೇನ್​ನಲ್ಲಿ ಬಂಧಿಸಲಾಗಿತ್ತು.