ಕ್ರೈಮಿಯಾ: ರಷ್ಯಾ ಹಿಡಿತದಲ್ಲಿದ್ದ ಕ್ರೈಮಿಯಾವನ್ನು ಮುಕ್ತಗೊಳಿಸುವ ಪ್ರಯತ್ನದಲ್ಲಿ ಉಕ್ರೇನ್‌ನ ವಿಶೇಷ ಪಡೆಗಳು ಧೈರ್ಯತೋರಿವೆ, ಜಲಮಾರ್ಗದ ಮೂಲಕ ದಾಳಿ ನಡೆಸಿ ರಷ್ಯಾದ ಮಿಲಿಟರಿ ನೆಲೆ ಮತ್ತು ಉಪಕರಣಗಳನ್ನು ನಾಶ ಮಾಡಿವೆ. ಯುಕೆ ನೀಡಿದ್ದ ಸ್ಟಾರ್ಮ್ ಶ್ಯಾಡೋ ಕ್ಷಿಪಣಿಗಳನ್ನು ಬಳಸಿ ಕ್ರೈಮಿಯಾದಲ್ಲಿನ ರಷ್ಯಾ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ.
ಈ ದಾಳಿಯಿಂದ ಮಾಸ್ಕೋ ತೀರಕ್ಕೆ ಹತ್ತಿರವಿರುವ ಕ್ರೈಮಿಯಾ ನಗರದ ನಾಗರಿಕರಿಗೆ ತಮ್ಮ ರಕ್ಷಣೆಗೆ ಉಕ್ರೇನ್ ಇದೆ ಎಂಬ ಸಂದೇಶ ರವಾನಿಸುವುದು ಇದರ ಉದ್ದೇಶವಾಗಿತ್ತು ಎನ್ನಲಾಗುತ್ತಿದೆ. ಆದರೆ ಕ್ರೈಮಿವನ್ನು ಮರಳಿ ಪಡೆಯುವುದರಿಂದ ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ನಡೆಸುವುದಕ್ಕೆ ಹಿನ್ನಡೆಯಾಗಲಿದೆ ಎನ್ನಲಾಗುತ್ತಿದೆ. ಇನ್ನು ಕ್ರೈಮಿಯಾ ನಗರಕ್ಕೆ ರಷ್ಯಾದಿಂದ ಸಂಪರ್ಕ ಕಲ್ಪಿಸುವ ಸೇತುವೆಗಳನ್ನು ದ್ವಂಸಗೊಳಿಸುವ ಮೂಲಕ ರಷ್ಯಾ ಸೇನೆ ಉಕ್ರೇನ್ನತ್ತ ಬಾರದಂತೆ ತಡೆಯುವ ಯತ್ನವನ್ನೂ ಉಕ್ರೇನ್ ಸೇನಾ ಪಡೆಗಳು ಹಲವು ಬಾರಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
"ನಾವು ಏನನ್ನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಉಕ್ರೇನ್ ಮತ್ತು ಆಕ್ರಮಿತ ಕ್ರೈಮಿಯಾದಲ್ಲಿನ ಜನರು ಉತ್ಸಾಹವನ್ನು ಕಳೆದುಕೊಳ್ಳುವುದಿಲ್ಲ. ಉಕ್ರೇನ್‌ಗೆ ಹಿಂತಿರುಗುವ ಕ್ರೈಮಿಯಾದಲ್ಲಿ ನಂಬಿಕೆ ದೂರ ಮಾಡಲು ಸಾಧ್ಯವಿಲ್ಲ ಎಂದು ಇತರ ಉಕ್ರೇನಿಯನ್ ಸೇನಾಪಡೆಯ ಇತರ ಘಟಕಗಳ ಸಹಕಾರದೊಂದಿಗೆ ಕ್ರೈಮಿಯಾದಲ್ಲಿ ರಾತ್ರಿಯ ದಾಳಿಯಲ್ಲಿ ಭಾಗಿಯಾಗಿದ್ದ 10 ಬ್ರಾಟ್‌ಸ್ಟೋವ್ ಬೆಟಾಲಿಯನ್ ಸೈನಿಕರಲ್ಲಿ ಒಬ್ಬರಾದ ಮುಝೈಕಂತ್ ತಿಳಿಸಿದರು.
ರಷ್ಯಾದ ಪಡೆಗಳು 2014 ರಲ್ಲಿ ಕ್ರೈಮಿಯಾವನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದವು. ಕ್ರೈಮಿಯಾ ದ್ವೀಪವು ರಷ್ಯಾಗೆ ಪ್ರಾಮುಖ ಬಂದರಾಗಿದ್ದು, ಇದು ಯುದ್ಧಕ್ಕೆ ಆಯಕಟ್ಟಿನ ಜಾಗವಾಗಿತ್ತು. ಶತ್ರುಗಳು ತಮ್ಮ ಸೇನಾ ಸಿಬ್ಬಂದಿ ಮತ್ತು ವಾಹನಗಳನ್ನು ಕ್ರಿಮಿಯನ್ ಕಡಲತೀರಕ್ಕೆ ಸ್ಥಳಾಂತರಿಸಲು ಉಪಯೋಗಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ ಪ್ರಮುಖ ಸರಕು ಸಾಗಾಣಿಕೆ ಕೇಂದ್ರವಾಗಿದೆ.