ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಇನ್ನೊಂದು ತಿಂಗಳು ಜೈಲೇ ಗತಿ. ಏಕೆಂದರೆ ಇವರ ನ್ಯಾಯಾಂಗ ಬಂಧನ ಅವಧಿಯನ್ನು ಲಂಡನ್‌ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಆಗಸ್ಟ್ 6ರ ವರೆಗೆ ವಿಸ್ತರಿಸಿದೆ.
ಸದ್ಯ ಜೈಲಿನಲ್ಲಿರುವ ನೀರವ್ ಮೋದಿಯ (48) ನ್ಯಾಯಾಂಗ ಬಂಧನ ಅವಧಿ ಇಂದಿಗೆ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್ ಬಂಧನದ ಅವಧಿಯನ್ನು ವಿಸ್ತರಿಸಿದೆ. ಈ ಕುರಿತು ನ್ಯಾಯಾಧೀಶ ಎಮ್ಮಾ ಅರ್ಬುತ್‌ನೋಟ್ ಆದೇಶ ಹೊರಡಿಸಿದರು.
ಅದೇ ಇನ್ನೊಂದೆಡೆ, ಇವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಸೆಪ್ಟೆಂಬರ್ ನಲ್ಲಿ ಎರಡನೇ ಹಂತದ ವಿಚಾರಣೆ ನಡೆಯಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್ ನಲ್ಲಿ ಬಂಧಿಸಲಾಗಿದೆ. ಇದಾಗಲೇ ಇವರ ಅನೇಕ ಆಸ್ತಿಪಾಸ್ತಿಗಳನ್ನು, ಬ್ಯಾಂಕ್ ಠೇವಣಿಗಳನ್ನು, ಆಭರಣಗಳನ್ನು ಕೋರ್ಟ್ ಆದೇಶದ ಮೇರೆಗೆ ವಶಪಡಿಸಿಕೊಳ್ಳಲಾಗಿದೆ.