ನ್ಯೂಸ್

'ನಿಮ್ಮ ತಂದೆ ಮುಖ್ಯಮಂತ್ರಿಯಾಗಲಿದ್ದಾರೆ': ಸುದ್ದಿ ಕೇಳಿ ಆಪರೇಷನ್ ಥಿಯೇಟರ್‌ನಲ್ಲಿದ್ದ ಮೋಹನ್ ಯಾದವ್ ಪುತ್ರಿ ಮಾಡಿದ್ದೇನು?

ಉಜ್ಜಯಿನಿ: ಬಿಜೆಪಿ ಹೈಕಮಾಂಡ್ ಸೋಮವಾರ ಮಧ್ಯಪ್ರದೇಶದ ನೂತನ ಸಿಎಂ ಆಗಿ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಎಲ್ಲಾ ಊಹಾಪೋಹಗಳನ್ನು ತಳ್ಳಿಹಾಕಿ ಶಾಸಕ ಮೋಹನ್ ಯಾದವ್ ಅವರನ್ನು ಸಿಎಂ ಎಂದು ಘೋಷಿಸಲಾಯಿತು. ಮೋಹನ್ ಯಾದವ್ ಹೆಸರು ಘೋಷಣೆಯಾದ ನಂತರ ಅವರ ಬೆಂಬಲಿಗರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಮೋಹನ್ ಕುಟುಂಬಸ್ಥರು ಕೂಡ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಆ ವೇಳೆ ಮೋಹನ್ ಯಾದವ್ ಅವರ ಮಗಳು ಆಸ್ಪತ್ರೆಯಲ್ಲಿದ್ದರು.

ಆಪರೇಷನ್ ಥಿಯೇಟರ್‌ನಲ್ಲಿದ್ದರು ಮಗಳು ಆಕಾಂಕ್ಷಾ
ಮೋಹನ್ ಯಾದವ್ ಅವರ ಮಗಳು ಆಕಾಂಕ್ಷಾ ವೈದ್ಯೆ. ಮೋಹನ್ ಯಾದವ್ ಅವರನ್ನು ಮಧ್ಯಪ್ರದೇಶ ಸಿಎಂ ಮಾಡುವ ಘೋಷಣೆಯಾದಾಗ ಅವರ ಮಗಳು ಆಸ್ಪತ್ರೆಯಲ್ಲಿದ್ದರು. ಆಪರೇಷನ್ ಥಿಯೇಟರ್ ನಲ್ಲಿ ಆಪರೇಷನ್ ಗೆ ತಯಾರಿ ನಡೆಸುತ್ತಿದ್ದರು. ಆದರೆ ತಂದೆ ಸಿಎಂ ಆದ ಬಳಿಕವೂ ಆಕಾಂಕ್ಷಾ ತನ್ನ ಕರ್ತವ್ಯ ನಿರ್ವಹಿಸುವುದನ್ನು ಮರೆಯಲಿಲ್ಲ. ಆಪರೇಷನ್ ಥಿಯೇಟರ್​​​​​​ನಲ್ಲಿಯೇ ಮಗಳು ಆಕಾಂಕ್ಷಾಗೆ ತಂದೆ ಸಿಎಂ ಆಗುವ ಸುದ್ದಿ ಸಿಕ್ಕಿತ್ತು. ಆದರೆ ಈ ಸಮಯದಲ್ಲಿಯೂ ಆಕೆ ತನ್ನ ಕರ್ತವ್ಯವನ್ನು ನಿರ್ವಹಿಸಲು ಮರೆಯಲಿಲ್ಲ. ಮೊದಲು ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ, ಆ ನಂತರ ತನ್ನ ನಿವಾಸಕ್ಕೆ ಬಂದರು. ಮನೆ ತಲುಪಿದ ನಂತರ ಆಕಾಂಕ್ಷಾ ಕೂಡ ತನ್ನ ಕುಟುಂಬದೊಂದಿಗೆ ಸಂಭ್ರಮಿಸಿದರು.

ಸಿಎಂ ಸ್ಥಾನಕ್ಕೆ ಮೋಹನ್ ಯಾದವ್ ಹೆಸರು ಘೋಷಣೆಯಾದ ಬೆನ್ನಲ್ಲೇ ಅವರ ಸಹೋದರಿಯರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಮೋಹನ್ ಅವರ ತಂದೆ ಸಹೋದರಿ ಕಲಾವತಿ ಯಾದವ್ ಹಾಗೂ ಪತ್ನಿ ಸೀಮಾ ಯಾದವ್ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ಮೋಹನ್ ಯಾದವ್ ಅವರಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಮಗಳು ಇದ್ದಾರೆ.