ವಾಷಿಂಗ್ಟನ್: ಭಾರತೀಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದವರಲ್ಲ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ತಮ್ಮ ಪ್ರತಿಭೆ ಮೂಲಕ ಉತ್ತಮ ಸ್ಥಾನ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಅವರಿಗಿದೆ. ಅದಕ್ಕೆ ಮತ್ತೊಂದು ಉದಾಹರಣೆಯಾಗಿ ಉಡುಪಿಯ ಮಾಲಾ ಅಡಿಗ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರತಿದಿನ 18-20 ರೊಟ್ಟಿ ತಿನ್ನುತ್ತಾನೆ ಆದರೂ 18 ತಿಂಗಳಿನಿಂದ ಶೌಚಕ್ಕೇ ಹೋಗಿಲ್ಲ; ವಿಚಿತ್ರ ಬಾಲಕನ ಕಥೆ
ಅಮೆರಿಕದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಡೊನಾಲ್ಡ್ ಟ್ರಂಪ್ ಅಧಿಕಾರವಾಧಿ ಮುಗಿದಿದ್ದು, ಜೋ ಬಿಡೆನ್ ತಮ್ಮ ಆಡಳಿತ ಆರಂಭಿಸಿದ್ದಾರೆ. ಜೋ ಬಿಡೆನ್ ಅವರ ಪತ್ನಿ ಜಿಲ್ ಬಿಡೆನ್ (ಅಮೆರಿಕದ ಪ್ರಥಮ ಮಹಿಳೆ) ಅವರಿಗೆ ಪಾಲಿಸಿ ಡೈರೆಕ್ಟರ್ ಆಗಿ ಭಾರತದ ಅದರಲ್ಲೂ ಕರ್ನಾಟಕದ ಉಡುಪಿಯ ಮೂಲದ ಮಹಿಳೆ ಮಾಲಾ ಅಡಿಗ ಆಯ್ಕೆಯಾಗಿದ್ದಾರೆ. ಅವರನ್ನು ಅಧ್ಯಕ್ಷ ಜೋ ಬಿಡೆನ್ ಅವರೇ ಆಯ್ಕೆ ಮಾಡಿದ್ದಾರೆ.
ಮಾಲಾ ಅಡಿಗ ಹಿರಿಯರು ಉಡುಪಿ ಜಿಲ್ಲೆ ಕುಂದಾಪುರ ಮೂಲದವರು. ಅವರ ತಂದೆ ರಮೇಶ್ ಅಡಿಗ ಅಮೆರಿಕಾದ ಖ್ಯಾತ ವೈದ್ಯರು. ಮಾಲಾ ಅವರು ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲೇ. ಅವರು ಕಳೆದ 50 ವರ್ಷದಿಂದ ಅಮೆರಿಕಾದಲ್ಲೇ ವಾಸಿಸುತ್ತಿದ್ದಾರೆ.
ಕುಂದಾಪುರ ತಾಲೂಕು ಕಕ್ಕುಂಜೆಯ ಅಡಿಗ ಕುಟುಂಬದ ಕುಡಿ ಮಾಲಾ ಅವರು ಈ ಹಿಂದೆ ಬಿಡೆನ್ ಫೌಂಡೇಶನ್ನ ಉನ್ನತ ಶಿಕ್ಷಣ ನಿರ್ದೇಶಕಿಯಗಿದ್ದರು. ಬರಾಕ್ ಒಬಾಮಾ ಅವರಿಗೆ ಶಿಕ್ಷಣ, ಸಾಂಸ್ಕೃತಿಕ ವಿಭಾಗದ ಉಪ ಸಹಾಯಕ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅಮೆರಿಕಾದ ನ್ಯಾಶನಲ್ ಸೆಕ್ಯೂರಿಟಿ ಸ್ಟಾಫ್ನಲ್ಲಿ ಮಾನವ ಹಕ್ಕುವಿಭಾಗದ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಇದೀಗ ಪ್ರಥಮ ಮಹಿಳೆಯ ಪಾಲಿಸಿ ಡೈರೆಕ್ಟರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.