Uber | ಭಾರತದಲ್ಲಿ ಉಬರ್ ಸಂಸ್ಥೆ Uber ಫಾರ್ ಟೀನ್ಸ್ ಎಂಬ ಹೊಸ ಸೇವೆಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ. ದೇಶಾದ್ಯಂತದ ಪೋಷಕರ ಮನಸ್ಸಿಗೆ ನೆಮ್ಮದಿಯನ್ನು ನೀಡುವುದರ ಜೊತೆಗೆ ಅವರ ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡುವ ಗುರಿಯನ್ನು ಈ Uber ಫಾರ್ ಟೀನ್ಸ್ ಯೋಜನೆ ಒಳಗೊಂಡಿದೆ. ಇದು GPS ಟ್ರ್ಯಾಕಿಂಗ್, ಸಮಯಕ್ಕೆ ಸರಿಯಾದ ಸೇವೆಯನ್ನು ಹೊಂದಿದ್ದು, ಟ್ರ್ಯಾಕಿಂಗ್ ಮತ್ತು ಅಪ್ಲಿಕೇಶನ್‌ನಲ್ಲಿ ತುರ್ತು ಬಟನ್ಅನ್ನು ಒಳಗೊಂಡಿರುವ ಕಟ್ಟುನಿಟ್ಟಾದ ಸುರಕ್ಷತಾ ಕ್ರಮದೊಂದಿಗೆ ತನ್ನ ಸೇವೆ ಆರಂಬಿಸಲಿದೆ.
ಇದನ್ನೂ ಓದಿ: ನಿಮ್ಮ ಕನಸಿನಲ್ಲಿ ಈ 3 ಪಕ್ಷಿಗಳು ಕಂಡರೆ ನೀವು ಕೆಲವೇ ದಿನಗಳಲ್ಲಿ ಕುಬೇರರಾಗುತ್ತೀರಿ? ಹಾಗಾದ್ರೆ ಆ ಪಕ್ಷಿಗಳು ಯಾವುವು; Dream
ಉಬರ್ ಇಂದು (2) ಉಬರ್ ಫಾರ್ ಟೀನ್ಸ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದನ್ನು ಭಾರತದಲ್ಲಿ 13 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದದು, ಸುರಕ್ಷಿತ, ವಿಶ್ವಾಸಾರ್ಹ ಮತ್ತು ಅನುಕೂಲಕರ ಸೇವೆಯನ್ನು ನೀಡಲಿದೆ.
ಬೆಂಗಳೂರು, ಪುಣೆ, ಚೆನ್ನೈ, ಕೋಲ್ಕತ್ತಾ, ದೆಹಲಿ NCR, ಹೈದರಾಬಾದ್, ಮುಂಬೈ, ಅಹಮದಾಬಾದ್, ಜೈಪುರ, ಕೊಚ್ಚಿ, ಚಂಡೀಗಢ, ಲಕ್ನೋ ಮತ್ತು ಭುವನೇಶ್ವರ ಸೇರಿದಂತೆ ದೇಶದ 37 ನಗರಗಳಲ್ಲಿ ಉಬರ್ ಫಾರ್ ಟೀನ್ಸ್ ಸೇವೆಯನ್ನು ಪ್ರಾರಂಭಿಸಿದೆ.
ಇನ್ನೂ ಈ ಬಗ್ಗೆ ಉಬರ್ ಇಂಡಿಯಾ ಅಧ್ಯಕ್ಷ ಪ್ರಭ್ಜೀತ್ ಸಿಂಗ್ ಮಾತನಾಡಿದ್ದು, ಭಾರತದಲ್ಲಿ ಹದಿಹರೆಯದವರು ಮತ್ತು ಅವರ ಕುಟುಂಬಗಳು ಎದುರಿಸುತ್ತಿರುವ ಸಾರಿಗೆ ಸವಾಲುಗಳನ್ನು ನಾವು ಗುರುತಿಸಿದ್ದೇವೆ. ಉಬರ್ ಫಾರ್ ಟೀನ್ಸ್‌ನೊಂದಿಗೆ, ಪೋಷಕರು ಒಪ್ಪಿಕೊಳ್ಳುವಂತಹ ಸೇವೆಯನ್ನು ನೀಡುವ ಮೂಲಕ ಅನೇಕ ಸವಾಲುಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ. ಈ ಸೇವೆಯನ್ನು ಹದಿಹರೆಯದವರು ಸುಲಭವಾಗಿ ಬಳಸಬಹುದಾಗಿದೆ ಎಂದಿದ್ದಾರೆ. 63% ರಷ್ಟು ಪೋಷಕರು ತಮ್ಮ ಹದಿಹರೆಯದ ಮಕ್ಕಳನ್ನು ಶಾಲೆಯ ನಂತರ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಕಳುಹಿಸಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದೆಲ್ಲವನ್ನೂ ಗಮಿಸಿನ ಉಬರ್ ಸಂಸ್ಥೆ ಇದೀಗ ಈ ಸೇವೆಯನ್ನು ಜಾರಿಗೆ ತಂದಿದೆ.
ಪೋಷಕರು ತಮ್ಮ ಅಪ್ಲಿಕೇಶನ್‌ನಲ್ಲಿ ಇದಕ್ಕೆ ಸಂಬಂಧಿಸಿದ ಅಧಿಸೂಚನೆಗಳನ್ನು ಸ್ವೀಕರಿಸುತ್ತಾರೆ
ಖಾತೆ ರಚಿಸಿದ ನಂತರ ಹದಿಹರೆಯದವರು ತಾವು ಹೋಗಬೇಕಾದ ಸ್ಥಳದ ಬಗ್ಗೆ ತಿಳಿಸುವುದು
ಹದಿಹರೆಯದವರು ತಮ್ಮ ಖಾತೆಯನ್ನು ರಚಿಸಿಕೊಳ್ಳಬೇಕಾಗಿರುತ್ತದೆ.
ಉಬರ್ ಖಾತೆಯನ್ನು ಹೊಂದಿರುವ ಪೋಷಕರು ತಮ್ಮ ಹದಿಹರೆಯದ ಮಗುವನ್ನು ಈ ಅಪ್ಲಿಕೇಶನ್ಗೆ ಸೇರಿಸುವುದು.