ನ್ಯೂಸ್

ಪಾಕ್​ನಲ್ಲಿ 2 ಬಿಳಿ ಹುಲಿ ಮರಿ ಕರೊನಾಗೆ ಬಲಿ!

ಪಾಕಿಸ್ತಾನದ ಲಾಹೋರ್ ಮೃಗಾಲಯದಲ್ಲಿ ಎರಡು ಬಿಳಿ ಹುಲಿ ಮರಿಗಳು ಕೋವಿಡ್-19 ಸೋಂಕಿಗೆ ಬಲಿಯಾಗಿವೆ. ಜನವರಿ 30ರಂದು ಈ ಮರಿಗಳು ಸತ್ತಿದ್ದು, ಕರೊನಾವೇ ಇದಕ್ಕೆ ಕಾರಣವೆಂದು ದೃಢಪಟ್ಟಿದೆ.

ಈ ಹುಲಿ ಮರಿಗಳು ಪಾಕಿಸ್ತಾನದಲ್ಲಿ ಸಾಮಾನ್ಯವಾಗಿರುವ ಫೆಲೈನ್ ಪಾನ್​ಲುಕೊಪೆನಿಯಾ ವೈರಸ್​ನಿಂದ ಬಳಲುತ್ತಿವೆಯೆಂದು ಭಾವಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮರಣೋತ್ತರ ಪರೀಕ್ಷೆ ವೇಳೆ ಅವುಗಳ ಶ್ವಾಸಕೋಶಗಳು ತೀವ್ರ ಹಾನಿಗೊಂಡಿದ್ದು ಪತ್ತೆಯಾಗಿದ್ದು, ಕರೊನಾ ಸೋಂಕು ಸಾವಿಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.