ನ್ಯೂಸ್

ಏರ್ ​​ಶೋನಲ್ಲಿ ವಿಮಾನಗಳ ಡಿಕ್ಕಿ, ಪೈಲಟ್​ಗಳಿಬ್ಬರೂ ಸಾವು!

ವಾಷಿಂಗ್ಟನ್​: ಏರ್ ಶೋನಲ್ಲಿ ವಿಮಾನಗಳು ಡಿಕ್ಕಿಯಾಗಿ ಎರಡರ ಪೈಲಟ್​ಗಳೂ ಸಾವಿಗೀಡಾದ ದುರಂತವೊಂದು ಸಂಭವಿಸಿದೆ. ಯುಎಸ್​​ನ ನೆವಡ ಪ್ರದೇಶದ ರೆನೊದಲ್ಲಿ ನಡೆದ ನ್ಯಾಷನಲ್​ ಚಾಂಪಿಯನ್​ಷಿಪ್​ ಏರ್​ ರೇಸಸ್ ಆ್ಯಂಡ್​ ಏರ್​ ಶೋನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಭಾನುವಾರ ನಡೆದ ಟಿ-6 ಗೋಲ್ಡ್ ರೇಸ್​ನ ಅಂತಿಮ ಹಂತದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ಸುಮಾರು 2.15ರ ಹೊತ್ತಿಗೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿವೆ. ಈ ಅವಘಡದಲ್ಲಿ ಇಬ್ಬರೂ ಪೈಲಟ್​ಗಳು ಸಾವಿಗೀಡಾದರು. ನಿಕ್​ ಮ್ಯಾಸಿ, ಕ್ರಿಶ್ ರಷಿಂಗ್ ಸಾವಿಗೀಡಾದ ಪೈಲಟ್​ಗಳು.

ಈ ಅವಘಡದಲ್ಲಿ ನಾರ್ತ್ ಅಮೆರಿಕನ್ ಟಿ-6ಜಿ ಮತ್ತು ಎಟಿ-6ಬಿ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಎರಡೂ ಸುಮಾರು ಒಂದು ಮೈಲಿ ದೂರ ಎಗರಿ ಬಿದ್ದಿವೆ. ಅವಘಡಕ್ಕೆ ಕಾರಣವಾದ ಅಂಶಗಳ ಕುರಿತು ತನಿಖೆ ನಡೆಸಲಾಗುವುದು ಎಂದು ನ್ಯಾಷನಲ್​ ಟ್ರಾನ್ಸ್​ಪೋರ್ಟೇಷನ್ ಸೇಫ್ಟಿ ಬೋರ್ಡ್ ತಿಳಿಸಿದೆ.